Site icon Suddi Belthangady

ಉತ್ತಮ ತಳಿ ಸಂರಕ್ಷಕ ಪ್ರಶಸ್ತಿಗೆ ಭಾಜನರಾದ ಬಿ.ಕೆ.ದೇವರಾವ್ ರವರಿಗೆ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಿಂದ ಸನ್ಮಾನ

ಬೆಳ್ತಂಗಡಿ: ಸೆ.12ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಮ್ಮ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಇವರಿಂದ ಉತ್ತಮ ತಳಿ ಸಂರಕ್ಷಕ ಪ್ರಶಸ್ತಿಗೆ ಭಾಜನರಾದ ಬಂಗಾಡಿಯ ಅಮೈ ದೇವರಾವ್ ಇವರನ್ನು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ವತಿಯಿಂದ ಸೆ.23ರಂದು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಬಿ.ಕೆ ದೇವರಾವ್ ರವರ ಬಗ್ಗೆ ಅವರ ಸಹೋದರರಾದ ಕುದ್ರೋಳಿ ಬಿ.ಕೆ ಸುಬ್ಬ ರಾವ್, ಹಾಗೂ ಕುಂಚಿಲ ಬಿ.ಕೆ ಗೋಪಾಲ ರಾವ್ ರವರು ಮಾತನಾಡಿ ಸಹೋದರನ ಸಾಧನೆಯನ್ನು ಕೊಂಡಾಡಿದರು.

ಪೂರ್ವಾಧ್ಯಕ್ಷರಾದ ಪಿ.ರಾಧಾಕೃಷ್ಣ ರಾವ್, ಶ್ರೀ ಕ್ಷೇತ್ರ ಧರ್ಮಸ್ಥಳದ ಪಾರುಪತ್ಯಗಾರರಾದ ಪಿ.ಲಕ್ಷ್ಮೀ ನಾರಾಯಣ ರಾವ್ ರವರು ಮಾತನಾಡಿ ಭತ್ತದ ಬೆಳೆ ನಾಶವಾಗುತ್ತಿರುವ ಈ ಕಾಲಘಟ್ಟದಲ್ಲಿ ಭತ್ತದ ಬೆಳೆಯ ಕುರಿತಾಗಿಯೇ, ವಿಪ್ರ ಸಮಾಜದಲ್ಲಿ ಅತೀ ಸಣ್ಣ ಸಮುದಾಯವಾಗಿರುವ ಸ್ಥಾನಿಕ ಸಮಾಜದ ಓರ್ವ ಸದಸ್ಯ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದು ವಿಪ್ರಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ ಎಂದರು.ಸಭಾದ ಅಧ್ಯಕ್ಷರು ಮಾತನಾಡಿ ನನ್ನ ಅಧ್ಯಕ್ಷಾವಧಿಯಲ್ಲಿ ದೇವರಾಯರಿಗೆ ಪ್ರಶಸ್ತಿ ಸಿಕ್ಕಿರುವುದು ನನ್ನ ಯೋಗ ಎಂದು ಹೇಳಿ ಶುಭಾಶಯ ಹೇಳಿದರು.

ಸಭಾದ ಕಾರ್ಯದರ್ಶಿ ವಿಕಾಸ್ ರಾವ್ ಮಾತನಾಡಿ ದೇವರಾಯರು ನಮ್ಮ ಸಮಾಜದ ಇತರರಿಗೆ ಪ್ರೇರಣೆಯಾಗಬಲ್ಲ ಕೃಷಿ ಋಷಿ ಎಂದರೆ ತಪ್ಪಾಗಲಾರದು.ಒಟ್ಟಾರೆಯಾಗಿ ತಮ್ಮ ಈ ಸಾಧನೆಗೆ ವಿವಿಧ ಪ್ರಶಸ್ತಿಗಳು ಲಭಿಸಿ, ನಮ್ಮ ಸಮಾಜದ ಕೀರ್ತಿ ಪತಾಕೆಯು ಮುಗಿಲೆತ್ತರಕ್ಕೆ ತಲುಪಲಿಯೆಂಬ ಆಶಯ ನಮ್ಮದು ಎಂದು ಆಗಮಿಸಿದ ಸಮಾಜ ಬಂಧುಗಳಿಗೆ ಧನ್ಯವಾದವನ್ನಿತ್ತರು.

ಪ್ರಸ್ತುತ ಕಾರ್ಯಕ್ರಮದ ವೇದಿಕೆಯಲ್ಲಿ ವಲಯದ ಅಧ್ಯಕ್ಷರುಗಳು, ಮಹಿಳಾ ವೇದಿಕೆಯ ಅಧ್ಯಕ್ಷೆ ಸ್ವಾತಿ ವಿಶ್ವಜಿತ್, ಕಾರ್ಯದರ್ಶಿ ಸವಿತಾ, ನಿರ್ದೇಶಕರುಗಳು ಇದ್ದರು. ಬಿ.ಕೆ ಧನಂಜಯ ರಾವ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಬಂಗಾಡಿ ವಲಯದ ಅಧ್ಯಕ್ಷ ಉಮೇಶ್ ರಾವ್ ಸ್ವಾಗತಿಸಿದರು.ಸುಮಾರು 40 ಸದಸ್ಯರುಗಳು ಭಾಗವಹಿಸಿದ್ದರು.

Exit mobile version