Site icon Suddi Belthangady

ಅರಸಿನಮಕ್ಕಿಯಿಂದ ಕಾಪಿನಬಾಗಿಲುವರೆಗೆ ರಸ್ತೆಯ ಬದಿಯ ಗಿಡಗಂಟಿ, ಮುಳ್ಳಿನ ಪೊದೆಗಳ ತೆರವು ಮತ್ತು ಸ್ವಚ್ಛತೆ

ಅರಸಿನಮಕ್ಕಿ: ಅರಸಿನಮಕ್ಕಿಯಿಂದ ಕಾಪಿನಬಾಗಿಲುವರೆಗೆ ರಸ್ತೆಯ ಇಕ್ಕೆಲಗಳಲ್ಲಿ ದಟ್ಟವಾಗಿ ಗಿಡಗಂಟಿ, ಪೊದೆಗಳು ಬೆಳೆದು ವಾಹನ ಸವಾರರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ ಅರಸಿನಮಕ್ಕಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ರವರ ನೇತೃತ್ವದಲ್ಲಿ ಸೆ.24ರಂದು ಗಿಡಗಂಟಿ, ಮುಳ್ಳಿನ ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು.

ಹಲವಾರು ಮಂದಿ ಸ್ವಯಂಪ್ರೇರಣೆಯಿಂದ ಯಂತ್ರೋಪಕರಣಗಳನ್ನು ನೀಡಿದರೆ, ಹಲವಾರು ಕೈಗಳು ಕತ್ತಿ ಮುಂತಾದ ಹತ್ಯಾರಗಳನ್ನು ಹಿಡಿದು ತಾವೇ ಮುಂದಾಗಿ ಗಿಡ ಗಂಟಿ ತೆರವು ಮಾಡಿದರು.

ದೇವಪ್ಪ ಕುಲಾಲ್, ಗಣೇಶ್ ಕುಲಾಲ್, ಲಿಂಗಪ್ಪ ಗೌಡ ಹೊಸ್ತೋಟ, ವಸಂತ ಗೌಡ ಉದ್ಯೇರೆ, ಸುದರ್ಶನ ಪಡ್ಡಾಯಿಬೆಟ್ಟು, ಶ್ರೀಕಾಂತ್ ಕಾಂತ್ರೆಲ್, ಜನಾರ್ದನ ಕುಲಾಲ್ ಪಲಸ್ತಡ್ಕ, ಹರ್ಷ ಗೌಡ ಬದ್ರಿಮಾರು, ಸುರೇಶ್ ಬುಡುಮುಗೇರು, ಪ್ರೇಮಚಂದ್ರ ಕೆ., ಪ್ರೇಮಚಂದ್ರ ಎಸ್., ಆನಂದ ಅಂಗಡಿಗುಡ್ಡೆ, ಸುಂದರೇಶ್, ಕೃಷ್ಣಪ್ಪ ಬೂಡುಮುಗೇರು, ಶ್ರವಣ್ ಪೂಜಾರಿ, ಯಶ್ವಿತ್, ಸುಬ್ರಹ್ಮಣ್ಯ ಮುದ್ದಿಗೆ, ಜಯಪ್ರಸಾದ್ ಶೆಟ್ಟಿಗಾರ್, ಗಣೇಶ್ ಹೊಸ್ತೋಟ, ಗಣೇಶ್ ತುಂಬೆತ್ತಡ್ಕ, ಸುರೇಶ್ ವಿ. ತುಂಬೆತ್ತಡ್ಕ, ಮುರಳೀಧರ ಶೆಟ್ಟಿಗಾರ್, ದಯಾನಂದ ಗೌಡ ಉದ್ಯೇರೆ, ಸುರೇಶ್ ಶೆಟ್ಟಿಗಾರ್, ಚಂದ್ರಶೇಖರ ಶೆಟ್ಟಿಗಾರ್ ಕಾಪಿನಡ್ಕ, ರಾಜಾರಾಮ್ ಕಾರಂತ್, ನವೀನ್ ರೈ ಗೋಳಿತ್ತಡಿ, ರಾಘವೇಂದ್ರ ಕೆ. ಬಿ., ತುಂಗ ಗೌಡ, ಜಯರಾಮ್ ಗೌಡ ಮಿಯಾಳ ಇವರು ಶ್ರಮದಾನ ಮಾಡಿದರು.

ರಾಜು ಕೆ. ಸಾಲಿಯಾನ್, ಶಿವಾನಂದ ಮಯ್ಯ, ವಿಠಲ ಗೌಡ ಉದ್ಯೇರೆ, ಸುಬ್ರಮಣ್ಯ ರಾವ್ ಪಡ್ಡಾಯಿಬೆಟ್ಟು, ಧೀರಜ್ ಕಾನ, ದಯಾನಂದ ಶಿಶಿಲ, ಉಮೇಶ್ ಸಪ್ತಗಿರಿ, ಅಭಿನಯ ಭಟ್ ಯಂತ್ರ ನೀಡಿ ನಿರ್ವಹಣೆಗೆ ಸಹಕರಿಸಿದರು.ಗಣೇಶ್ ಕುಲಾಲ್ ಮತ್ತು ಮನೆಯವರು ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಿದ್ದರು.ಉದಯ ಶಂಕರ್ ಕೊಡ್ಯಡ್ಕ ಇವರು ಸಂಜೆಯ ಚಹಾ-ಉಪಹಾರಕ್ಕೆ ವ್ಯವಸ್ಥೆ ಮಾಡಿದರು.ಶ್ರೀಧರ ಭಟ್ ಅನ್ನಪೂರ್ಣ ಫಾರ್ಮ್, ಅಚ್ಚುತ ಗೌಡ ಶಿಬಾಜೆ, ಅಬ್ಬಾಸ್ ಅಸರ್ ಟ್ರೆಡರ್ಸ್, ಸುಂದರ ರಾಣ್ಯ, ಸಾಗರ್ ಟ್ರೆಡರ್ಸ್, ವಿಠಲ ಗೌಡ ಉಪ್ಪರಡ್ಕ, ಶ್ರೀರಂಗ ದಾಮಲೆ ಮತ್ತು ಸರ್ವ ರೀತಿಯ ಸಹಕಾರವನ್ನು ಮತ್ತು ಆರ್ಥಿಕ ಸಹಕಾರ ನೀಡಿದರು.

Exit mobile version