ನೆಲ್ಯಾಡಿ: ನೆಲ್ಯಾಡಿಯ ಸಂತ ವಿನ್ಸೆಂಟ್ ಡಿ ಪೌಲ್ ಸೊಸೈಟಿ ಯ ವಾರ್ಷಿಕ ಮಹಾ ಸಭೆ, ಸದಸ್ಯತ್ವ ನೋಂದಣಿ, ಪ್ರತಿಜ್ಞಾ ನವೀಕರಣದೊಂದಿಗೆ ಸೊಸೈಟಿಯ ಕಳೆದ ಒಂದು ವರ್ಷದ ವಿವಿಧ ಚಟುವಟಿಕೆಗಳ ಸಂಪೂರ್ಣ ಅವಲೋಕನವನ್ನು ಮಾಡಲಾಯಿತು.
ವಿನ್ಸೆಂಟ್ ಡಿ ಪೌಲ್ ಸೊಸೈಟಿ ಕಳೆದ ಒಂದು ವರ್ಷದಲ್ಲಿ ಸುಮಾರು ಎರಡು ಲಕ್ಷ ಐವತ್ತು ಸಾವಿರ ರೂಪಾಯಿಗಳ ಸೇವಾ ಕಾರ್ಯವನ್ನು ಕೈಗೊಳ್ಳಲಾಯಿತು.
ಕುಟುಂಬಗಳಿಗೆ ಆಹಾರ, ಮಾಸಿಕ ಆರ್ಥಿಕ ಬೆಂಬಲ, ಮೆಡಿಕಲ್ ಸಹಾಯ, ಶೌಚಾಲಯ ನಿರ್ಮಾಣ, ನಿರ್ಗತಿಕರ ಆಶಾ ಕೇಂದ್ರಗಳಿಗೆ ಭೇಟಿ ಮತ್ತು ಆಹಾರ ಪೂರೈಕೆ ಇತ್ಯಾದಿ ಕಾರ್ಯಕ್ರಮಗಳನ್ನು ಕಳೆದ ಒಂದು ವರ್ಷದಲ್ಲಿ ಕೈಗೊಳ್ಳಲಾಯಿತು.
ಚರ್ಚ್ ನ ಪರವಾಗಿ ಧರ್ಮ ಗುರುಗಳು ಕೆ ಎಸ್ ಎಂ ಸಿ ಎ ಕೇಂದ್ರ ನಿರ್ದೇಶಕರು ಆದ ವಂದನಿಯ ಫಾ. ಶಾಜಿ ಮಾತ್ಯು ಸೊಸೈಟಿ ಯ ಸೇವಾ ಕಾರ್ಯಕ್ರಮ ಗಳನ್ನು ಕೊಂಡಾಡಿ ಇದು ಶುಭ ಸಂದೇಶ ವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ದೇವರ ಕಾರ್ಯಗಳಾಗಿವೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಸಣ್ಣಿ ಒಟ್ಟಪ್ಲಾಕ್ಕಲ್ ಇವರ ನೇತೃತ್ವದಲ್ಲಿ ನೂಜಿ ಬಾಲ್ತಿಲದ ಮರಿಯಾಲಯ ನಿರ್ಗತಿಕ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಮದ್ಯಾಹ್ನದ ಉಪಹಾರವನ್ನು ವಿತರಿಸಲಾಯಿತು.