Site icon Suddi Belthangady

ಮಡಂತ್ಯಾರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-223ನೇ ಸಾಲಿನ ವಾರ್ಷಿಕ ಮಹಾಸಭೆ- ರೂ. 1.53 ಕೋಟಿ ನಿವ್ವಳ ಲಾಭ- ಸದಸ್ಯರಿಗೆ ಶೇ.16%ಡಿವಿಡೆಂಡ್

ಮಡಂತ್ಯಾರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ಮಹಾಸಭೆಯು ಸೆ.24 ರಂದು ಆಶಿರ್ವಾದ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ. ಅರವಿಂದ ಜೈನ್‌ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘವು 2022-23ನೇ ಆರ್ಥಿಕ ವರ್ಷದಲ್ಲಿ 4947 ಸದಸ್ಯ ಬಲ ಹೊಂದಿದ್ದು ಪಾಲು ಬಂಡವಾಳವು 3.24 ಕೋಟಿ, 65.94 ಕೋಟಿ ಠೇವಣಿ, ರೂ 6.79 ಕೋಟಿ ನಿಧಿ ಹೊಂದಿದ್ದು 60.49 ಕೋಟಿ ಸಾಲ ಹೊರ ಬಾಕಿಯಿದೆ. ಶೇಕಡ 95 ರಷ್ಟು ಸಾಲ ವಸೂಲಾತಿ ಆಗಿದ್ದು, ಲೆಕ್ಕ ಪರಿಶೋಧನೆಯಲ್ಲಿ ‘ಎ’ ಶ್ರೇಣಿ ದೊರಕಿರುತ್ತದೆ.

ಸಂಘದ ಸದಸ್ಯರಿಗೆ ವರದಿ ವರ್ಷದಲ್ಲಿ ರೂ. 1.53 ಕೋಟಿ ಲಾಭಗಳಿಸಿ ಶೇ. 16% ಡಿವಿಡೆಂಡ್‌ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮೀ, ನಿರ್ದೇಶಕರಾದ ಕುಮಾರ ನಾಯ್ಕ, ಪದ್ಮನಾಭ ಸಾಲಿಯಾನ್, ಅಬ್ದುಲ್‌ ರಹಿಮಾನ್ ಪಡ್ಪು , ಎಚ್ ಧರ್ಣಪ್ಪ ಗೌಡ, ಕಿಶೋರ್ ಕುಮಾರ್ ಶೆಟ್ಟಿ, ರಮೇಶ್‌, ಜೋಯೆಲ್ ಮೆಂಡೋನ್ಸಾ, ತುಳಸಿ ಪೂಜಾರಿ, ಉಷಾಲತಾ,ಡಿ. ಸಿ. ಸಿ. ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.

2022-23 ನೇ ಸಾಲಿನ ವರದಿಯನ್ನು ಮತ್ತು ಲೆಕ್ಕ ಪತ್ರಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿಸೋಜ ಮಂಡಿಸಿದರು. ಕಾರ್ಯಸೂಚಿಯಲ್ಲಿರುವ ವಿಷಯಗಳನ್ನು ಸಿಬ್ಬಂದಿಗಳಾದ ಗಣೇಶ್‌, ಸವಿನ್, ಕಿಶನ್ ಕುಮಾರ್ ವಾಚಿಸಿದರು.

ಮಹಿಳಾ ಸಿಬ್ಬಂದಿಗಳು ಪ್ರಾರ್ಥಿಸಿ, ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಪದ್ಮನಾಭ ಸಾಲಿಯಾನ್ ಧನ್ಯವಾದವಿತ್ತರು.

ಮಹಾಸಭೆಯಲ್ಲಿ ಬೆಳ್ತಂಗಡಿ ತೋಟಗಾರಿಕಾ ಇಲಾಖೆಯ ಮಹಾವೀರ ಇವರು ಹವಮಾನ ಆಧಾರಿತ ಬೆಳೆ ವಿಮೆಯ ಬಗ್ಗೆ ಮಾಹಿತಿ ನೀಡಿದರು.

Exit mobile version