ತಣ್ಣೀರುಪಂತ: ಕರಾಯ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯುವು ಸಂಘದ ಅಧ್ಯಕ್ಷ ಎಂ.ಜನಾರ್ದನ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಸೆ.23 ರಂದು ಬಾಪೂಜಿ ಕೇಂದ್ರ ಕಲ್ಲೇರಿಯಲ್ಲಿ ನಡೆಯಿತು.
ಸಂಘದ ಸ್ಥಾಪಕಾಧ್ಯಕ್ಷ ಹಾಗೂ ಅಧ್ಯಕ್ಷ ಜನಾರ್ದನ ಪೂಜಾರಿ ಗೇರುಕಟ್ಟೆ ಮಾತನಾಡಿ ಐದು ಪಿಗ್ಮಿ ಸಂಗ್ರಾಹಕರು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.ಸಂಘದ ಪ್ರಸಕ್ತ ಸಾಲಿನಲ್ಲಿ 7.5ಲಕ್ಷ ರೂಪಾಯಿ ಲಾಭಗಳಿಸಿ ಶೇ.10% ಡಿವಿಡೆಂಡ್ ನೀಡಲಾಗಿದೆ.ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸಂಘದ ಕಟ್ಟಡಗಳಿಗೆ ಯಾವುದೇ ಸಾಲಗಳನ್ನು ಮಾಡದೆ ಸಂಘವು ಸದೃಢವಾಗಿ ಇಂದು ಬೆಳೆದು ನಿಂತಿದೆ.ಸದಸ್ಯರ ಸಹಕಾರ ಸಂಘದ ಏಳಿಗೆಗೆ ಅತ್ಯಗತ್ಯ ಎಂದರು.
ನಾಟಿ ವೈದ್ಯ ಸೂರಪ್ಪ ಪೂಜಾರಿ ಅಳಕ್ಕೆ ಅವರನ್ನು ಸನ್ಮಾನಿಸಲಾಯಿತು.ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ರೂಪಾಲಿ, ಕಾವ್ಯಶ್ರೀ,ಹರ್ಷ, ಅಂಕಿತ, ಧನುಷ್, ಶ್ರೇಯಾ ಹಾಗೂ ಅನನ್ಯ ಅವರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಸದಾನಂದ ಸಾಲ್ಯಾನ್, ನಿರ್ದೇಶಕರುಗಳಾದ ಅಣ್ಣಿ ಯಾನೆ ನೋಣಯ್ಯ ಪೂಜಾರಿ, ಪ್ರಭಾಕರ ಸಾಲ್ಯಾನ್, ಸೋಮಪ್ಪ ಪೂಜಾರಿ, ರವೀಂದ್ರ ಪೂಜಾರಿ, ಸೂರಪ್ಪ ಬಂಗೇರ, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಸಂತೋಷ್ ಕುಮಾರ್, ದಿನೇಶ್ ಕುಮಾರ್, ಸುಂದರ, ಪುಷ್ಪಾಕರ ನಾಯಕ್ ಸಹಕಾರಿಸಿದರು.
ಸಂಘದ ಸಿಬ್ಬಂದಿ ಮಮತಾ ಪ್ರಾರ್ಥಿಸಿ, ವರದಿ ವಾಚಿಸಿದರು.ಸಂಘದ ಸಿಬ್ಬಂದಿ ರೇಖಾ ಸ್ವಾಗತಿಸಿ, ಸಂಘದ ನಿರ್ದೇಶಕ ಜಯವಿಕ್ರಮ್ ಕಲ್ಲಾಪು ವಂದಿಸಿ, ಸಂಘದ ವ್ಯವಸ್ಥಾಪಕ ಜನಾರ್ದನ ಪೂಜಾರಿ ನಿರೂಪಿಸಿದರು.