Site icon Suddi Belthangady

ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘ ವಾರ್ಷಿಕ ಮಹಾಸಭೆ- ರೂ.189 ಕೋಟಿ ವ್ಯವಹಾರ ಸದಸ್ಯರಿಗೆ ಶೇ.14% ಡಿವಿಡೆಂಡ್

ಗುರುವಾಯನಕೆರೆ: ಗುರುವಾಯನಕೆರೆ ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆಯು ಸೆ.23ರಂದು ಸಂಘದ ಅಧ್ಯಕ್ಷ ವಿಲೋಶಿಯಸ್‌ ಡಿಸೋಜ ಇವರ ಅಧ್ಯಕ್ಷತೆಯಲ್ಲಿ ಸಂಘದ ಸಭಾ ಭವನ ವಿಕಾಸ ಸದನ ಗುರುವಾಯನಕೆರೆಯಲ್ಲಿ ಜರಗಿತು.

ಸಂಘದಲ್ಲಿ 2022-23 ಸಾಲಿನಲ್ಲಿ ರೂ.43.96ಕೋಟಿ ಠೇವಣಿ ಸಂಗ್ರಹವಾಗಿದ್ದು, ರೂ.189ಕೋಟಿ ವ್ಯವಹಾರ ನಡೆಸಿ ರೂ.23ಲಕ್ಷ ಲಾಭ ಗಳಿಸಿದೆ.

ಸಂಘದ ಅಧ್ಯಕ್ಷ ವಿಲೋಸಿಯಸ್‌ ಡಿಸೋಜ ರವರು ಸದಸ್ಯರಿಗೆ ಶೇ.14 ಡಿವಿಡೆಂಡ್ ಘೋಷಿಸಿದರು.ಉಪಾಧ್ಯಕ್ಷ ಯೋಗೀಶ್ ಪೈ, ನಿರ್ದೇಶಕರಾದ ಮೋಹನ್‌ ಹೆಗ್ಡೆ, ಗೋಪಿನಾಥ್ ನಾಯಕ್, ಅಂತೋನಿ ಪಾಯಿಸ್, ರಾಘವ ಶೆಟ್ಟಿ ಗ್ರೆಗೋರಿ ಡಿಮೆಲ್ಲೋ, ಪ್ರವೀಣ್ ಕುಮಾರ್ ಹೆಚ್ ಎಸ್. , ಜಗದೀಶ್, ಶೇಖರ ನಾಯ್ಕ, ಒಲ್ವಿನ್ ಮೋನಿಸ್, ದಿನೇಶ್ ನಾಯಕ್, ಪ್ರವೀಣ್ ಚಂದ್ರ ಮೆಹಂದಲೆ, ಮಮತಾ ಎಂ. ಶೆಟ್ಟಿ, ಪ್ರೇಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿತಾ ಫೆರ್ನಾಂಡಿಸ್, ಪ್ರಭಾರ ಮುಖ್ಯ ಕಾರ್ಯನಿರ್ವಹಣಾದಿಕಾರಿ ರೋಹಿತ್ ಕುಮಾರ್ ಕೆ. ಸ್ವಾಗತಿಸಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.ನಿರ್ದೇಶಕ ಪ್ರವೀಣ್‌ ಕುಮಾರ್ ಹೆಚ್.ಎಸ್ ವಂದಿಸಿದರು.ನಿರ್ದೇಶಕ ಒಲ್ವಿನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.

ಸಿಬಂದಿಗಳಾದ ಮ್ಯಾಕ್ಸಿಮ್ ಪಾಯ್ಸ್, ಶುಭಲಕ್ಷ್ಮಿ, ದಿವ್ಯ ಬಿ. ಎಸ್. ಹರ್ಷಿತ್, ಕೀರ್ತನ್ ಶಿರವಂತ, ಪ್ರತಿಮಾ ಕಾಮತ್, ಅಕ್ಷತಾ, ಸತೀಶ್, ಸಂದೀಪ್, ಸುಕುಮಾರ್ ಹೆಗ್ಡೆ, ದಿನೇಶ್ ಗೌಡ, ಚೈತ್ರೇಶ್ ಜೈನ್, ಸಿರಾಜುದ್ದೀನ್, ಒಲಿವಿಯ, ಡಿಸೋಜಾ, ಹರ್ಷಿತಾ, ಮೇಘಶ್ರೀ ಅನೂಪ್ ಜೋಯೆಲ್ ಡಿಸೋಜಾ ಹಾಗೂ ಪಿಗ್ಮಿ ಸಂಗ್ರಾಹಕರು ಸಹಕರಿಸಿದರು.

Exit mobile version