Site icon Suddi Belthangady

ಕಳೆಂಜ: ಪುಳ್ಳಾಯ ಸೇತುವೆ ಬಳಿ ಕಾಣಿಕೆ ಡಬ್ಬಿ ಪತ್ತೆ

ಕಳೆಂಜ: ಇಲ್ಲಿಯ ಪುಳ್ಳಾಯ ಸೇತುವೆ ಬಳಿ ನೀರಿನಲ್ಲಿ ಕಾಣಿಕೆ ಡಬ್ಬಿ ಪತ್ತೆಯಾಗಿದೆ.

ಸ್ಥಳೀಯರು ಇದನ್ನು ಗಮನಿಸಿದ್ದು, ಸ್ಥಳೀಯ ದೇವಸ್ಥಾನದ ಕಾಣಿಕೆ ಡಬ್ಬಿಯೋ ಅಥವಾ ಬೇರೆ ದೇವಸ್ಥಾನದಿಂದ ಕಳವು ಮಾಡಿ ತಂದು ಎಸೆದು ಹೋಗಿರಬಹುದೋ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.

ಬಳಿಕ ಧರ್ಮಸ್ಥಳ ಠಾಣೆಗೆ ದೂರು ನೀಡಿದರು.ಇದೀಗ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಕಾಣಿಕೆ ಡಬ್ಬಿಯಲ್ಲಿ ಯಾವುದೇ ಕುರುಹುಗಳಿಲ್ಲ ಎಂದು ತಿಳಿದು ಬಂದಿದ್ದು, ಕಾಣಿಕೆ ಡಬ್ಬಿಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

Exit mobile version