ಅರಸಿನಮಕ್ಕಿ: ಸರಕಾರಿ ಪ್ರೌಢ ಶಾಲೆ ಅರಸಿನಮಕ್ಕಿಯಲ್ಲಿ ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ ಬಾಲಕಿಯರ ತ್ರೋಬಾಲ್ ಪಂದ್ಯಾಟ ಸ21 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷೆ ಗಾಯತ್ರಿರವರು ನಡೆಸಿದರು.ನಂತರ ಮಾತನಾಡಿದ ಅವರು ಸೋಲೇ ಗೆಲುವಿನ ಸೋಪಾನ ಎಲ್ಲರು ಉತ್ತಮವಾಗಿ ಆಡಿ ಎಂದು ಶುಭಕೋರಿದರು.
ಅರಸಿನಮಕ್ಕಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ ಎಸ್ ರವರು ಮಾತನಾಡಿ ಪಠ್ಯಕ್ಕೆ ಕೊಟ್ಟಷ್ಟೇ ಮಹತ್ವ ಕ್ರೀಡೆಗೂ ಕೊಟ್ಟಾಗ ವಿದ್ಯಾರ್ಥಿಗಳು ಮನೋಲ್ಲಾಸದಿಂದ ಇರುತ್ತಾರೆ.ಎಂದು ಹೇಳಿ ಪಂದ್ಯಾಟಕ್ಕೆ ಆಗಮಿಸಿದ ಮಕ್ಕಳಿಗೆ ಶುಭಾಶಯ ತಿಳಿಸಿದರು.
ತಾಲೂಕು ಶಿಕ್ಷಣ ಸಂಯೋಜಕಿ ಚೇತನಶ್ರೀ ರವರು ಮಾತನಾಡಿ ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದೀರಿ ಶಾಲೆಯ ವಾತಾವರಣ ಕ್ರೀಡಾಪಟುಗಳಿಗೆ ಅದ್ಭುತವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ವಾಮಾನ ತಾಮನ್ಕರ್ ರವರು ಮಾತನಾಡಿ ಶಾಲೆಯಲ್ಲಿ ಕ್ರೀಡೆಗೆ ಒತ್ತು ಕೊಡುವುದರಿಂದ ಮಕ್ಕಳು ಆರೋಗ್ಯವಂತರಾಗಿರುತ್ತಾರೆ ಎಂದು ಹೇಳಿ ಶುಭಹಾರೈಸಿದರು.
ಇನ್ನೊರ್ವ ಅತಿಥಿ ಸಮಾಜ ಸೇವಕರು ಉದ್ಯಮಿಗಳು ಆದಂತ ಧರ್ಮರಾಜ್ ಅಡ್ಕಾಡಿ ರವರು ಮಾತನಾಡಿ 45ವರ್ಷದ ಹಿಂದೆ ಅರಸಿನಮಕ್ಕಿಯಲ್ಲಿ ತಾಲೂಕು ಮಟ್ಟದ ಪಂದ್ಯಾಟ ನಡೆದಿತ್ತು.ಸುಧೀರ್ಘ ವರ್ಷದ ನಂತರ ತಾಲೂಕು ಮಟ್ಟದ ಪಂದ್ಯಾಟ ನಡೆಯುತ್ತಿರುವುದು ಸಂತಸ ತಂದಿದೆ ಮಕ್ಕಳು ವಿಧ್ಯೆ ಮತ್ತು ಕ್ರೀಡೆಯನ್ನು ಮೈಗೂಡಿಸಿಗೊಂಡು ದೇಶದ ಸಂಪತ್ತು ಆಗಬೇಕು ಎಂದು ಹೇಳಿ ಶುಭ ಹರಸಿದರು.
ವೇದಿಕೆಯಲ್ಲಿ ಸಭಾಧ್ಯಕ್ಷತೆಯನ್ನು ಗಾಯತ್ರಿ ರವರು ಸುಧೀರ್ ಕುಮಾರ್ ಎಂ.ಎಸ್, ಧರ್ಮರಾಜ್ ಅಡ್ಕಾಡಿ, ವಾಮನ ತಾಮನ್ಕರ್, ಶ್ರೀರಂಗ ದಾಮ್ಲೆ, ತನಿಯಪ್ಪ ಗೌಡ, (ಎಸ್ ಡಿ ಎಂ ಸಿ ಅಧ್ಯಕ್ಷರು )ದಿನಕರ್ ಕುರುಪ್, ಚೇತನಾಕ್ಷಿ, ವಿಲ್ಫ್ರೇಡ್ ಪಿಂಟೋ, ರಾಮಯ್ಯ, ಚಂದ್ರು (ಶಾಲಾ ಮುಖ್ಯ ಶಿಕ್ಷಕರು ), ಸುಜಯ (ದೈಹಿಕ ಶಿಕ್ಷಣ ಸಂಯೋಜಕಿ), ಶರತ್ (ನಿಡ್ಲೆ ಶಾಲಾ ಮುಖ್ಯ ಗುರುಗಳು), ನಾಗರಾಜ್ (ನೆಲ್ಯಡ್ಕ ಶಾಲಾ ಮುಖ್ಯ ಗುರುಗಳು)ಲಾವಣ್ಯ ಗ್ರಾ.ಪಂ ಸದಸ್ಯೆ, ಲಲಿತ (ಎಸ್ ಡಿ ಎಂಸಿ ಉಪಾಧ್ಯಕ್ಷರು)ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಶಾಲಾ ವಿದ್ಯಾರ್ಥಿನಿಯರು ಹಾಗೂ ಸ್ವಾಗತವನ್ನು ಶಾಲಾ ಮುಖ್ಯ ಗುರುಗಳಾದ ಚಂದ್ರು ರವರು, ಧನ್ಯವಾದವನ್ನು ಶಾಲಾ ಶಿಕ್ಷಕಿ ಸೇವ್ರಿನ್ ಮಾರ್ಟಿಸ್ ರವರು, ನಿರೂಪಣೆಯನ್ನು ಮಂಜುಳಾ(ಗಣಿತ ಶಿಕ್ಷಕಿ), ಪ್ರಸ್ತಾವಿಕ ನುಡಿಯನ್ನು ಮೀನಾಕ್ಷಿ ಪಿ (ದೈಹಿಕ ಶಿಕ್ಷಕಿ)ರವರು ನೆರವೇರಿಸಿದರು.
ಅಂತಿಮವಾಗಿ ವಿಜೇತರಾದವರ ಪಟ್ಟಿ: ಬಾಲಕರ ವಿಭಾಗ ಪ್ರಥಮ- ಸೈಂಟ್ ತೆರೇಸಾ ಬೆಳ್ತಂಗಡಿ, ದ್ವಿತೀಯ-ಸರಕಾರಿ ಪ್ರೌಢಶಾಲೆ ಬೆಳ್ತಂಗಡಿ
ಬಾಲಕಿಯರ ವಿಭಾಗ: ಪ್ರಥಮ – ಸೈಂಟ್ ಮೇರಿಸ್ ಲಾಯಿಲ, ದ್ವಿತೀಯ- ಸರಕಾರಿ ಪ್ರೌಢಶಾಲೆ ನಾರಾವಿ