Site icon Suddi Belthangady

ಶಾಲೆತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ನಿವೃತ್ತ ಪಶುವೈದ್ಯ ಯಾಧವ್ ರವರಿಗೆ ಸನ್ಮಾನ-ಸದಸ್ಯರಿಗೆ 20%ಡಿವಿಡೆಂಟ್, ಹಾಲು ಉತ್ಪಾದಕರಿಗೆ 65%ಬೋನಸ್ ಘೋಷಣೆ

ಕಳೆಂಜ: ಶಾಲೆತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ ಕಳೆಂಜ ಇದರ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸಂಘದ ಆವರಣದಲ್ಲಿ ಸೆ.21ರಂದು ಸಂಘದ ಅಧ್ಯಕ್ಷ ಹರೀಶ್ ರಾವ್.ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘದ ಸದಸ್ಯರಿಗೆ 20% ಡಿವಿಡೆಂಟ್ ಹಾಗೂ ಹಾಲು ಉತ್ಪಾದಕರಿಗೆ 65%ಬೋನಸ್ ನೀಡುವುದಾಗಿ ತಿಳಿಸಿದರು.

ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುರಳಿಧರ ರವರು ಮಂಡಿಸಿದರು.

ಪಶುವೈದ್ಯಾಧಿಕಾರಿ ಡಾಕ್ಟರ್ ಗಣಪತಿ ರವರು ಹೈನುಗಾರಿಕೆ ಬಗ್ಗೆ ಮಾಹಿತಿ, ಅನಾರೋಗ್ಯಗೊಂಡಾಗ ಮನೆ ಮದ್ದುಗಳ ಬಗ್ಗೆ, ರೋಗದ ಬಗ್ಗೆ, ಹಸುವಿನ ವಿಮೆಯ ಬಗ್ಗೆ ಮಾಹಿತಿ ನೀಡಿದರು.

ತದನಂತರ ಕಳೆಂಜ ಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಗೊಂಡ ಪಶುವೈದ್ಯ ಡಾಕ್ಟರ್ ಯಾದವ್ ರವರಿಗೆ ಸನ್ಮಾನವನ್ನು ಏರ್ಪಡಿಸಿದ್ದರು.ಹಾಗೆಯೇ ಸಂಘಕ್ಕೆ ಅತಿ ಹೆಚ್ಚು ಹಾಲು ಮಾರಾಟ ಮಾಡಿದ ಮೊದಲ ಸ್ಥಾನ ರತ್ನಾಕರ ಗೌಡ (ಗುತ್ತು ಮನೆ ಶಿಬರಾಜೆ )ದ್ವಿತೀಯ ಸ್ಥಾನ ಚಂದ್ರಶೇಖರ ಗೌಡ ಪಿಲ್ಯಡ್ಕ, ತೃತೀಯ ಸ್ಥಾನ ಭಾರತಿ ವಲಂಬಳ ರವರಿಗೆ ಪ್ರೋತ್ಸಾಹಕರ ಬಹುಮಾನ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ನಿಡ್ಲೆ ಸೊಸೈಟಿ ಅಧ್ಯಕ್ಷರಾದ ರಮೇಶ್ ರಾವ್.ಕೆ, ಗ್ರಾ. ಪಂ ಸದಸ್ಯರಾದ ಗಣೇಶ್ ಕುಂದರ್ ಉಪಸ್ಥಿತರಿದ್ದರು.

ಹಾಗೆಯೇ ವೇದಿಕೆಯಲ್ಲಿ ಹರೀಶ್ ರಾವ್. ಕೆ,(ಅಧ್ಯಕ್ಷರು)ರಘುಚಂದ್ರ ಪೂಜಾರಿ,(ಉಪಾಧ್ಯಕ್ಷರು) ನಿರ್ದೇಶಕರುಗಳಾದ ನಿತ್ಯಾನಂದ ರೈ,ರತ್ನಾಕರ ಗೌಡ,ಲೋಕಯ್ಯ ಗೌಡ, ಸುಂದರ ಪೂಜಾರಿ, ಮೋಹನ ಬಿ, ಆನಂದ ಗೌಡ, ಅಶೋಕ್ ಭಟ್ ಕೆ, ಶಶಿಕಲಾ, ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಮುರಳಿಧರ್ ಉಪಸ್ಥಿತರಿದ್ದರು.

ಸ್ವಾಗತ ಮತ್ತು ನಿರೂಪಣೆಯನ್ನು ನಿತ್ಯಾನದ ರೈ ರವರು ಧನ್ಯವಾದವನ್ನು ಅಶೋಕ್ ಭಟ್ ಕಾಯಡ ರವರು ನೆರವೇರಿಸಿದರು.

ಸಂಘದ ಸಿಬ್ಬಂದಿಗಳಾದ ತುಳಸಿ ಪಿ ಮತ್ತು ಪ್ರೇಮ ರವರು ಕಾರ್ಯಕ್ರಮಕ್ಕೆ ಸಹಕರಿಸಿದರು.

Exit mobile version