ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.21ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷರಾದ ಲಿಂಗಪ್ಪ ನಾಯ್ಕರ ಅದ್ಯಕ್ಷತೆಯಲ್ಲಿ ನಡೆಯಿತು.
ಸಂಘವು ಒಟ್ಟು 2300 ಸದಸ್ಯರನ್ನು ಹೊಂದಿದ್ದು ರೂ.5ಕೋಟಿ ವ್ಯವಹಾರ ನಡೆಸಿ ರೂ.3 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಸಂತೋಷ್ ನಾಯ್ಕ, ನಿರ್ದೇಶಕರಾದ ಚೆನ್ನಕೇಶವ ನಾಯ್ಕ, ಸೀತಾರಾಮ ಬಿ. ಎಸ್., ಪ್ರಸಾದ್ ನಾಯ್ಕ, ಪ್ರಶಾಂತ್ ನಾಯ್ಕ,ತಾರಾನಾಥ, ಶ್ರೀಮತಿ ಲೀಲಾವತಿ ಶ್ರೀಮತಿ ಸವಿತಾ ಉಪಸ್ಥಿತರಿದ್ದರು.
ಕರ್ಮಯೋಗಿ ರೈತ, ಗದ್ದೆಯನ್ನು ಎತ್ತುಗಳ ಮುಖಾಂತರ ಉಳುಮೆ ಮಾಡಿ ಕೃಷಿ ಮಾಡಿ ವಿಶೇಷ ಸಾಧನೆ ಮಾಡಿದ ಉರುವಾಲಿನ ನಾರಾಯಣ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಉತ್ತಮ ಅಂಕಗಳಿಸಿದ ಸಂಘದ ಸದಸ್ಯರ ಶಾಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಧನ ವಿತರಿಸಿ ಗೌರವಿಸಲಾಯಿತು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತಿ ವಾರ್ಷಿಕ ವರದಿಯನ್ನು ಮಂಡಿಸಿದರು.ಸಂಘದ ಸಿಬ್ಬಂದಿಗಳು ಸಹಕರಿಸಿದರು.ನಿರ್ದೇಶಕ ಸೀತಾರಾಮ ಬಿ.ಎಸ್ ಸ್ವಾಗತಿಸಿ, ನಿರ್ದೇಶಕ ಚೆನ್ನಕೇಶವ ನಾಯ್ಕ ವಂದಿಸಿದರು.