ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಪ್ರೀತಮ್ ಡಿ.ಯವರ ಅಧ್ಯಕ್ಷತೆಯಲ್ಲಿ ಸೆ.21ರಂದು ಸಂಘದ ಸಾಧನಾ ಕಟ್ಟಡ ಅಟಲ್ ಜಿ.ಸಭಾಭವನದಲ್ಲಿ ನಡೆಯಿತು.
ಆರ್ಥಿಕ ವರ್ಷದಲ್ಲಿ ಸಂಘ ರೂ.1,64,29,030ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ ಮಾಡಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಸತೀಶ್ ಹೊಳ್ಳ ವರದಿ ವಾಚಿಸಿದರು.
ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಶಾಂಭವಿ ರೈ, ಉಮಾನಾಥ್, ಶೀನ, ಧನಲಕ್ಷ್ಮೀ ಜನಾರ್ಧನ, ಪ್ರಭಾಕರ ಗೌಡ, ನೀಲಾಧರ ಶೆಟ್ಟಿ, ಪ್ರಸನ್ನ ಹೆಬ್ಬಾರ್, ವಿಕ್ರಮ್ ಗೌಡ, ತಂಗಚ್ಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಹಿರಿಯ 13 ಸದಸ್ಯರನ್ನು ಕೃಷಿ ಕ್ಷೇತ್ರದ 4 ಮಂದಿ ಸಾಧಕರಿಗೆ, ಸನ್ಮಾನಿಸಲಾಯಿತು.
ಸಂಘದ ವ್ಯಾಪ್ತಿಯ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಿರ್ದೇಶಕಿ ಧನಲಕ್ಷ್ಮೀ ಜನಾರ್ಧನ ಸ್ವಾಗತಿಸಿದರು.ಪಿಗ್ಮಿ ಸಂಗ್ರಹಕ ಎ.ಎಸ್.ಲೋಕೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಸಂಘದ ಸಿಬ್ಬಂದಿಗಳು ಸಹಕರಿಸಿದರು.ಸಂಘದ ಸದಸ್ಯರು ಉಪಸ್ಥಿತರಿದ್ದರು.