Site icon Suddi Belthangady

ಬೆಳ್ತಂಗಡಿ: ಸ.ಪ್ರ.ದ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನೆ

ಬೆಳ್ತಂಗಡಿ:ಸ.ಪ್ರ.ದ ಕಾಲೇಜು, ಬೆಳ್ತಂಗಡಿಯ ರಾಷ್ಟ್ರೀಯ ಸೇವಾ ಯೋಜನೆಯ 2023-24ನೇ ಸಾಲಿನ ಚಟುವಟಿಕೆಗಳನ್ನು ಸೆ.15.ರಂದು ಡಾ. ಜೋಸೆಫ್ ಎನ್.ಎಮ್, ನಿವೃತ್ತ ಪ್ರಾಂಶುಪಾಲರು ಉದ್ಘಾಟಿಸಿ ಎನ್.ಎಸ್.ಎಸ್ ಗೀತೆಗಳನ್ನು ಹಾಡಲು ತರಬೇತಿಯನ್ನು ನೀಡಿದರು.

ಮಳೆ ನೀರು ಕೊಯ್ಲು, ನಾಯಕತ್ವ, ವ್ಯಕ್ತಿತ್ವ ವಿಕಸನ, ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ, ಆರೋಗ್ಯ ಪೂರ್ಣ ಸಮಾಜದಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರ ಪಾತ್ರದ ಬಗ್ಗೆ ಜಾಗೃತಿಯನ್ನು ಮೂಡಿಸಿದರು.ರಾಷ್ಟ್ರೀಯ ಸೇವಾ ಯೋಜನೆಯ ಸಲಹೆಗಾರರಾದ ಡಾ. ಸುಬ್ರಹ್ಮಣ್ಯ.ಕೆ ಇವರು ಎನ್.ಎಸ್.ಎಸ್ ನ ಮಹತ್ವದ ಬಗ್ಗೆ ಮಾತನಾಡಿದರು. ಪ್ರೊ. ರೊನಾಲ್ಡ್ ಪ್ರವೀಣ್ ಕೊರೆಯಾ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಕವಿತಾ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹಾಗೂ ಎನ್.ಎಸ್.ಎಸ್ ನಾಯಕ, ನಾಯಕಿಯರಾದ ಕು. ಉಮಾವತಿ, ರೋಶನಿ, ಶಿವಾನಂದ ಹಾಗೂ ನಿತಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಗದೀಶ ಪ್ರಥಮ ಬಿ.ಎ ಸ್ವಾಗತಿಸಿದರು. ಸಂದೇಶ್ ಪ್ರಥಮ ಬಿ.ಬಿ.ಎ ವಂದಿಸಿದರು, ಕು. ರಶ್ಮಿತಾ ಮತ್ತು ಸನ್ನಿಧಿ ದ್ವಿತೀಯ ಬಿ.ಬಿ.ಎ ನಿರೂಪಿಸಿದರು.

Exit mobile version