Site icon Suddi Belthangady

ಮಚ್ಚಿನ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಮಚ್ಚಿನ: ಮಚ್ಚಿನ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಸೆ.20ರಂದು ನಡೆಯಿತು.

ಸಂಘದ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಅದ್ಯಕ್ಷತೆ ವಹಿಸಿ ಮಾತನಾಡಿ ಸಂಘದಲ್ಲಿ ಒಟ್ಟು ರೂ.4,65,434 ಲಕ್ಷ ಲಾಭಗಳಿಸಿದ್ದು ಸದಸ್ಯರಿಗೆ 65% ಬೋನಸ್, ಡಿವಿಡೆಂಡ್ 10% ಘೋಷಿಸಿದರು.ಶೀಘ್ರದಲ್ಲಿ ಸಂಘಕ್ಕೆ 24ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ.ಟೆಂಡರ್ ಆಗಿದೆ.ಸಂಘದಲ್ಲಿ ಹಾಲು ಶೇಖರಣೆ ಕಡಿಮೆಯಾಗಿದೆ.ಆದುದರಿಂದ ಲಾಭ ಕಡಿಮೆಯಾಗಿದೆ.ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣವಾಗುವಾಗ ಸಂಘದಲ್ಲಿ ಹಾಲು ಹೆಚ್ಚು ಹೆಚ್ಚು ಸಂಗ್ರಹವಾಗುವಂತೆ ಅಧ್ಯಕ್ಷರು ಕರೆ ನೀಡಿದರು.

ವೇದಿಕೆಯಲ್ಲಿ ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ರಾಜೇಶ್, ಉಪಾಧ್ಯಕ್ಷ ಪಿ.ಮಾಧವ ನಾಯ್ಕ, ಪಶು ವೈದ್ಯಾಧಿಕಾರಿ ಡಾ.ಪೂಜಾ ಪಶುಗಳ ಪೋಷಣೆ, ಹಾಲಿನ ಇಳುವರಿ ಯಾವ ರೀತಿಯಲ್ಲಿ ಹೆಚ್ಚಿಸುವ ಬಗ್ಗೆ, ಕರು ರಕ್ಷಣೆ, ಪಶು ಆಹಾರ ಯಾವ ರೀತಿಯಲ್ಲಿ ಉಪಯೋಗಿಸುವ ಬಗ್ಗೆ, ಪಶುಗಳಿಗೆ ಔಷದಿ ಬಳಸುವ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ನಿರ್ದೇಶಕರುಗಳಾದ ಕೆ.ವಿಶ್ವನಾಥ ಬಂಗೇರ, ನೋಣಯ್ಯ ಎಂ.ಕೆ, ಸದಾನಂದ ಪೂಜಾರಿ, ಹೆನ್ರಿ ರೊಡ್ರಿಗಸ್, ಶಿವರಾಮ ಬಂಗೇರ, ವನಿತಾ ಜಯರಾಮ, ಗುಲಾಬಿ, ರುಕ್ಮಿಣಿ, ಶಾಂತಮ್ಮ, ಮೋನಪ್ಪ ಮೂಲ್ಯ, ಯುವರಾಜ್ ಜೈನ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಚಂದಪ್ಪ ಸಾಲಿಯಾನ್ ವರದಿ, ಲೆಕ್ಕ ಪತ್ರ ಮಂಡಿಸಿದರು.ಸಿಬ್ಬಂದಿ ಸಂತೋಷ್ ಕುಮಾರ್, ಇಂದಿರಾ ಸಹಕರಿಸಿದರು.2022-23ನೇ ಸಾಲಿನ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಪ್ರಥಮ ರಚನಾ, ದ್ವಿತೀಯ ದೀಕ್ಷಾ, ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರಥಮ ತನ್ವಿತ್, ದ್ವಿತೀಯ ರಶ್ಮಿತಾ ಇವರನ್ನು ವಿದ್ಯಾರ್ಥಿ ವೇತನ ನೀಡಲಾಯಿತು.ಕಾರ್ಯದರ್ಶಿ ಚಂದಪ್ಪ ಸಾಲಿಯಾನ್ ಸ್ವಾಗತಿಸಿ, ವಂದಿಸಿದರು.

Exit mobile version