Site icon Suddi Belthangady

20ನೇ ಮುಕ್ತ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಯ್ಯೂರಿನ ವಿದ್ಯಾರ್ಥಿಗಳು ಪ್ರಥಮ

ಕೊಯ್ಯುರು: ಶೋರಿನ್-ರಿಯು ಕರಾಟೆ ಅಸೋಸಿಯೇಷನ್, ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಮತ್ತು ಹೆಚ್.ಕೆ. ಅನಂತ್ ರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಷನ್, ಮೂಡಬಿದ್ರೆ ಇದರ ಜಂಟಿ ಆಶ್ರಯದಲ್ಲಿ ನಡೆದ 20ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್-2023, ಸೆಪ್ಟೆಂಬರ್ 9ರಂದು ಮೂಡಬಿದ್ರೆಯಲ್ಲಿ ನಡೆಯಿತು.

ಈ ಚಾಂಪಿಯನ್ಶಿಪ್ ನಲ್ಲಿ ಕೊಯ್ಯುರು ಕರಾಟೆ ಸ್ಕೂಲ್ ನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ಇತೇಶ್ ಬಜ(9ನೇ ತರಗತಿ) ಕುಮಿಟೆ ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಚಿರಾಗ್ ವಿ. ಕೆ ಕಲೆಂಜಾರ್( 6ನೇ ತರಗತಿ) ಕುಮಿಟೆಯಲ್ಲಿ ಪ್ರಥಮ, ಭುವನ್ ಬೈಪಾಡಿ (6ನೇ ತರಗತಿ) ಕತ ದಲ್ಲಿ ಪ್ರಥಮ, ಕುಮಿತೆಯಲ್ಲಿ ದ್ವಿತೀಯ ಸ್ಥಾನ, ಲಿಖಿನ್ ಪಾದೆಡ್ಕ (9ನೇ ತರಗತಿ) ಕುಮಿತೆ ಹಾಗೂ ಕತ ವಿಭಾಗದಲ್ಲಿ ದ್ವಿತೀಯ ಸ್ಥಾನ ,ಮಾನ್ವಿ ಕೊರ್ಯರೂ (5ನೇ ತರಗತಿ) ಹಾಗೂ ಸಾತ್ವಿಕ್ ಪಾಪುದಾಡ್ಕ (7 ನೇ ತರಗತಿ ) ಇವರು ಕುಮಿತೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕರಾಟೆ ತರಬೇತುದಾರರಾದ ಶಿಹಾನ್ ಅಬ್ದುಲ್ ರಹಿಮಾನ್ ಹಾಗೂ ಸೆನ್ಸಾಯಿ ಮೋಹನ್ ಬಜ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.

Exit mobile version