ಕಾಯರ್ತಡ್ಕ: ಸೆ.19ರಂದು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಯರ್ತಡ್ಕ ಬಳಗದಿಂದ ಬೆಳಗ್ಗೆ ಗಣಹೋಮ ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ ತದನಂತರ ಮಂಗಳಾರತಿ ಸಾರ್ವಜನಿಕರಿಗೆ ಮದ್ಯಾಹ್ನ ಅನ್ನಸಂತರ್ಪಣೆ ನಂತರ ಶಾಲಾಮಕ್ಕಳಿಂದ ಮತ್ತು ಹಳೇವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ ಶಾಸಕರು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ಧಾರ್ಮಿಕ ಸಭೆಯ ಉದ್ಘಾಟನೆಯನ್ನು ಗೌರವಧ್ಯಕ್ಷರಾದ ಹೆಚ್.ಸತೀಶ್ ಕುಮಾರ್ ಹೆಗ್ಡೆ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಪೆರ್ನಗೌಡ ನಡುಜಾರು ಅಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಯರ್ತಡ್ಕರವರು ವಹಿಸಿದ್ದರು.ಧಾರ್ಮಿಕ ಪ್ರವಚನವನ್ನು ವಿನಾಯಕ ಜೋಶಿರವರು ನಡೆಸಿಕೊಟ್ಟರು.
ಸಭೆಯಲ್ಲಿ ಕೃಷ್ಣಪ್ಪ, ಮೋಹನ್ ಗೌಡ ಪುತ್ಯೆ, ಶ್ರೀಧರ್ ರಾವ್, ಹೆಚ್ ವಿಜಯಕುಮಾರ್ ಉಪಸ್ಥಿತರಿದ್ದರು.ತದನಂತರ ಸಭೆಯಲ್ಲಿ ಜಿನರಾಜ್ ಪೊವಾಣಿ, ಹೆಚ್.ವಿಜಯಕುಮಾರ್, ಶೇಖರ ಗೌಡ ಪುತ್ಯೆ, ಸಂಜೀವ ಗೌಡ ಬಂಡೇರಿ, ಗೋಪಾಲಗೌಡ ಹಾರಿತ್ತಕಜೆ, ಪಿ.ಟಿ ದೇವಸ್ಯ ರವರನ್ನು ಸನ್ಮಾನಿಸಲಾಯಿತು.
ಸ್ವಾಗತ ಮಂಜುನಾಥ್ ಹಾರಿತ್ತಕಜೆ, ಧನ್ಯವಾದ ರಾಜೇಶ್ ಎಂ ಕೆ ನಿಡ್ಪಾಜೆ, ನಿರೂಪಣೆಯನ್ನು ಪ್ರಮೋದ್ ಕರ್ಬುಡೆಲ್, ವರದಿಯನ್ನು ಮನೋಹರ್ ಕಾಯರ್ತಡ್ಕ ನೆರವೇರಿಸಿದರು.