Site icon Suddi Belthangady

ನಾರಾವಿ: ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ-‘ಮಾದಕ ದ್ರವ್ಯ ಮನುಷ್ಯನಲ್ಲಿ ತಪ್ಪುಗಳನ್ನು ಮಾಡಿಸುತ್ತದೆ’: ಮಾರ್ಕ್ ಡಿಸೋಜ

ನಾರಾವಿ: “ಮಾದಕ ದ್ರವ್ಯಕ್ಕೆ ದಾಸರಾದವರು ಅವರಿಂದ ಹೊರಬರಲು ಕಷ್ಟಪಡಬೇಕಾಗುತ್ತದೆ.ಮಾದಕ ದ್ರವ್ಯ ಮನುಷ್ಯನಲ್ಲಿ ತಪ್ಪುಗಳನ್ನು ಮಾಡಿಸುತ್ತದೆ.ಮಾದಕ ವಸ್ತುಗಳ ಸೇವನೆಯ ಚಟವನ್ನು ಬಿಟ್ಟು ಮತ್ತೆ ಒಳ್ಳೆಯ ಬದುಕು ಕಟ್ಟಲು ಸಾದ್ಯವಿದೆ” ಎಂದು ಸಮಾಜಸೇವಕರಾದ ಶ್ರೀ ಮಾರ್ಕ್ ಡಿ ಸೋಜ ಮಂಗಳೂರು ಇವರು ಹೇಳಿದರು.

ಸಂತ ಅಂತೋನಿ ಪದವಿ ಕಾಲೇಜು ನಾರಾವಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಆಯೋಜಿಸಿದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಸ್.ಸಿ.ಎಸ್ ಆಸ್ಪತ್ರೆ ಮಂಗಳೂರು ಇಲ್ಲಿನ ವೈದ್ಯರಾದ ಡಾ| ಅನಿರುದ್ಧ್ ಇವರು ಮಾದಕ ದ್ರವ್ಯ ಸೇವನೆಯು ಮನುಷ್ಯನ ಮೆದುಳನ್ನು ಯಾವ ರೀತಿಯಾಗಿ ಘಾಸಿಗೊಳಿಸುತ್ತದೆ ಎಂಬುದನ್ನು ತಿಳಿಸಿದರು.ಮದ್ಯದ ವ್ಯಸನಕ್ಕೆ ಬಲಿಯಾಗಿ ಮತ್ತೆ ಅದರಿಂದ ಹೊರಬಂದು ನೆಮ್ಮದಿಯ ಜೀವನ ಸಾಗಿಸುತ್ತಿರುವ ಹಾಗೂ ಸಮಾಜಸೇವಕರಾದ ಎಲಿಯಾಸ್ ಮೊಂತೆರೊ ತಾಕೊಡೆ ಇವರು ತಮ್ಮ ಜೀವನದ ಬಗ್ಗೆ ವಿವರಿಸಿ ಮದ್ಯವ್ಯಸನದಿಂದಾಗುವ ದುಷ್ಪರಿಣಾಮವನ್ನು ಸವಿಸ್ತಾರವಾಗಿ ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ವಂ.ಡಾ.ಆಲ್ವಿನ್ ಸೆರಾವೊ ಎಲ್ಲರನ್ನು ಸ್ವಾಗತಿಸಿದರು.ವೇದಿಕೆಯಲ್ಲಿ ಎನ್.ಎಸ್.ಎಸ್.ಯೋಜನಾಧಿಕಾರಿಗಳಾದ ದಿನೇಶ್ ಬಿ.ಕೆ., ಉಪಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ಉಪಸ್ಥಿತರಿದ್ದರು.ಇತಿಹಾಸ ಉಪನ್ಯಾಸಕರಾದ ರಿಚರ್ಡ್ ಮೋರಸ್ ಕಾರ್ಯಕ್ರಮ ನಿರೂಪಿಸಿದರು.

Exit mobile version