ಧರ್ಮಸ್ಥಳ: ಜಿ.ಎಚ್.ಎಸ್.ಶಾಲೆ, ಕನ್ಯಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ. ಬಹುಮಾನ ವಿಜೇತರ ವಿವರ ಈ ಕೆಳಗಿನಂತಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಂಸ್ಕೃತ ಇದರಲ್ಲಿ ಸಮರ್ಥ್ ಎ ಪ್ರಥಮ ಸ್ಥಾನ, ಧಾರ್ಮಿಕ ಪಠಣ ಅರೇಬಿಕ್ ನಲ್ಲಿ ಮೊಹಮ್ಮದ್ ನಿಜಾಮ್ ಪ್ರಥಮ ಸ್ಥಾನ, ಶ್ರೇಯಸಿ ಎಚ್ಎಸ್ ಅಭಿನಯಗೀತೆಯಲ್ಲಿ ಪ್ರಥಮ, ಹಂಸಿಕಾ ವಿನೋದ್ ಟಿ ಎ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಪ್ರಥಮ, ರಿಷಿಕಾ ಎಚ್ ಆಶು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಮಾನ್ಯ ಎಸ್. ಇಂಗ್ಲೀಷ್ ಕಂಠ ಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಬಿ ವಿಹಾನ್ ಮಯ್ಯ ಭಕ್ತಿ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಮಾನ್ಯ ಎಸ್ ಕನ್ನಡ ಕಂಠ ಪಾಠ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಶ್ರಾವ್ಯ ಎಸ್ ಲಘು ಸಂಗೀತದಲ್ಲಿ ತೃತೀಯ ಸ್ಥಾನ, ಲಹರಿ ಡಿ ಜಿ ಕಥೆ ಹೇಳುವ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ವಿದ್ವತ್ ಜೈನ್ ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ ಸ್ಪರ್ಧೆಯಲ್ಲಿ ಆರುಶ್ ಪಿ ಜೋಶಿ ಪ್ರಥಮ, ಧಾರ್ಮಿಕ ಪಠಣ ಅರೇಬಿಕ್ ಸ್ಪರ್ಧೆಯಲ್ಲಿ ಫಾತಿಮಾ ಜಸಿನ ಪ್ರಥಮ, ಲಘು ಸಂಗೀತದಲ್ಲಿ ಪ್ರಾಪ್ತಿ ಶೆಟ್ಟಿ ಪ್ರಥಮ, ಆರಾಧ್ಯ ಪಿ ಜೋಶಿ ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಸ್ವಾತ್ಮ ಎಸ್ ಪುರೋಹಿತ್ ದ್ವಿತೀಯ ಸ್ಥಾನ, ಶ್ರವಣ್ ಬಿಜೆ ಮಿಮಿಕ್ರಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಛದ್ಮವೇಷ ಸ್ಪರ್ಧೆಯಲ್ಲಿ ಕಶ್ಯಪ್ ಮನೋಹರ್ ರಾವ್ ತೃತೀಯ ಸ್ಥಾನ, ಶ್ರೀ ವರ್ಧನ್ ಪಡ್ಕೇ ಪದ್ಯ ವಾಚನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.