Site icon Suddi Belthangady

ನಾಲ್ಕೂರು ಯುವಶಕ್ತಿ ಫ್ರೆಂಡ್ಸ್ ನಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಮುದ್ದು ಕೃಷ್ಣ ಸ್ಪರ್ಧೆ, ವಿವಿಧ ಆಟೋಟ ಸ್ಪರ್ದೆಗಳು

ಬಳಂಜ: ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆ 10 ರಂದು ನಿಟ್ಟಡ್ಕ ಶಾಲಾ ಮೈದಾನದಲ್ಲಿ ನಡೆಯಿತು.ಬೆಳಿಗ್ಗೆ ಕ್ರಿಡಾಕೂಟದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ತಿಮ್ಮಪ್ಪ ಪೂಜಾರಿ ನೇರವೇರಿಸಿ ಶುಭಕೋರಿದರು.

ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಸೀತರಾಮ ಪೂಜಾರಿ ವಹಿಸಿದ್ದರು.ಕ್ರೀಡಾಂಗಣ ಉದ್ಘಾಟನೆಯನ್ನು ಜೈಮಾತ ಕೇಟರೀಂಗ್ ಮಾಲಕ ಜನಾರ್ಧನ ಪೂಜಾರಿ ನೇರವೇರಿಸಿದರು.

ವೇದಿಕೆಯಲ್ಲಿ ಗ್ರಾ‌ಪಂ ಉಪಾಧ್ಯಕ್ಷ ಯಶೋಧರ ಶೆಟ್ಟಿ, ಗ್ರಾ.ಪಂ ಸದಸ್ಯ ಜಯಶೆಟ್ಟಿ ಪಾದೆ, ಬ್ರಹ್ಮಶ್ರೀ ಭಜನಾ ಮಂಡಳಿ ಸಂಚಾಲಕ ಹರೀಶ್ ವೈ ಚಂದ್ರಮ, ಯುವ ಉದ್ಯಮಿ ಸಚಿನ್ ಶೆಟ್ಟಿ ಕುರೆಲ್ಯ, ಕಂಚಿನಡ್ಕ ಕ್ಷೇತ್ರದ ಅಧ್ಯಕ್ಷ ವಿನಯ್ ಶೆಟ್ಟಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು‌.

ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬಳಂಜ ಬಿಲ್ಲವ ಸಂಘದ ನಿಕಟಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್ ವಹಿಸಿದ್ದರು.

ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ ರಾಷ್ಟ್ರೀಯತೆ ಮತ್ತು ಧರ್ಮದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಮುಖ್ಯ ಆತಿಥಿಗಳಾಗಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರವೀಂದ್ರ ಶೆಟ್ಟಿ ಬಳಂಜ, ಬಳಂಜ ಗ್ರಾ.ಪಂ ಅಧ್ಯಕ್ಷೆ ಶೋಭಾ ಕುಲಾಲ್, ಪ್ರಗತಿಪರ ಕೃಷಿಕರಾದ ಸುರೇಶ್ ಶೆಟ್ಟಿ ಕುರೆಲ್ಯ, ವಿಶ್ವನಾಥ ಹೊಳ್ಳ,ಗ್ರಾ.ಪಂ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ,ಯುವ ಉದ್ಯಮಿ ಪ್ರವೀಣ್ ಪೂಜಾರಿ ಮಂಗಳೂರು,ಬಳಂಜ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ,ಸುರೇಶ್ ಪೂಜಾರಿ ಜೈಮಾತ ನಾಲ್ಕೂರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿದರು.

ಪುಷ್ಪಾ ಗೀರೀಶ್ ಪ್ರಾರ್ಥನೆ ಹಾಡಿದರು.ಸಂತೋಷ್ ಪಿ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.ವಿಶಾಲ ಜಗದೀಶ್,ಸದಾನಂದ ಸಾಲಿಯಾನ್ ನಿರೂಪಿಸಿದರು,ಯತೀಶ್ ವೈ.ಎಲ್,ಕರುಣಾಕರ ಹೆಗ್ಡೆ ವಂದಿಸಿದರು.

ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ತಂಡದ ಯೋಗೀಶ್ ಆರ್,ಸಂತೋಷ್ ಕುಮಾರ್, ವಿಜಯ ಪೂಜಾರಿ,ಪ್ರಶಾಂತ್ ಅಂಚನ್,ಜಗದೀಶ್ ಕೋಟ್ಯಾನ್,ಪ್ರಶಾಂತ್ ಕೋಟ್ಯಾನ್,ರಂಜಿತ್ ಪೂಜಾರಿ,ಜಯಪ್ರಸಾದ್ ಕೋಟ್ಯಾನ್,ಸುಧೀಶ್ ಪೂಜಾರಿ,ಸಂಪತ್ ಪಿ ಕೋಟ್ಯಾನ್,ಪ್ರವೀಣ್ ಡಿ ಕೋಟ್ಯಾನ್,ಶರತ್ ಅಂಚನ್,ಚಂದ್ರಹಾಸ ಬಳಂಜ,ರಕ್ಷಿತ್ ಪೂಜಾರಿ,ಸುಧೀರ್ ಸಾಲಿಯಾನ್,ಪ್ರಣಾಮ್ ಶೆಟ್ಟಿ, ಮಹೇಶ್ ಕುಲಾಲ್,ಪ್ರಥಮ್ ಕುಮಾರ್,ಸತ್ಯಸಾಯಿ,ದಿನೇಶ್ ಪೂಜಾರಿ ಸಹಕರಿಸಿದರು.

ಪುಟಾಣಿ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ದೆ,ಬಾಲಕೃಷ್ಣ ಸ್ಪರ್ದೆ ಆಯೋಜಿಸಿದ್ದು ಸುಮಾರು 25 ಮಕ್ಕಳು ಕೃಷ್ಣವೇಷ ಹಾಕಿ ವೇದಿಕೆಗೆ ಹೆಜ್ಜೆ ಹಾಕಿದಾಗ ನೇರೆದ ಪ್ರೇಕ್ಷಕರು ಭಕ್ತಿಯಿಂದ ಮಕ್ಕಳನ್ನು ಬರಮಾಡಿಕೊಂಡರು.ಮಕ್ಕಳು ಕೃಷ್ಣ ಲೀಲೆಯನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು.

ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ವತಿಯಿಂದ ಬಾಲಕ- ಬಾಲಕಿಯರಿಗೆ, ಯುವಕ, ಯುವತಿಯರಿಗೆ, ಪುರಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ದೆಗಳು ನಡೆಯಿತು. ವಾಲಿಬಾಲ್ ಹಗ್ಗಜಗ್ಗಾಟ,ತ್ರೋಬಾಲ್, ವಿವಿಧ ಫನ್ನಿ ಗೇಮ್, ಗೋಣಿ ಚೀಲ ಸ್ಪರ್ದೆಗಳು ನಡೆಯಿತು.ನೂರಾರು ಸ್ಪರ್ದಾರ್ಥಿಗಳು ಗಾಳಿ ಮಳೆ ಲೆಕ್ಕಿಸದೆ ಖುಷಿಯಿಂದ ಆಟದಲ್ಲಿ ಭಾಗವಹಿಸಿದರು.ನೂರಾರು ಯುವಮನಸ್ಸುಗಳು ಸಂಭ್ರಮಿಸಿದರು.

ಜಾರುಕಂಬ ಸ್ಪರ್ದೆ ಅಮೋಘವಾಗಿತ್ತು, ಆಕರ್ಷಕವಾದ ಸೆಲ್ಫಿ ಕಾರ್ನರ್ ಮಾಡಿದ್ದು ಎಲ್ಲರೂ ಸೆಲ್ಫಿಗಾಗಿ ಮುಗಿಬಿಳುತ್ತಿದ್ದರು. ಆಕರ್ಷಕ ವೇದಿಕೆ,ಪುಟಾಣಿಗಳ ಸ್ಪರ್ದೆ,ನಿಧಿ ಅನ್ವೇಷಣೆ, ಗುಡ್ಡಕಾಡು ಓಟ ಫನ್ನಿ ಗೇಮ್ಸ್ ಎಲ್ಲರನ್ನು ಆಕರ್ಷಿಸಿತ್ತು.

Exit mobile version