Site icon Suddi Belthangady

ಸೆ.18 ರಿಂದ ಅ.5 ರವರೆಗೆ ಮುಳಿಯದಲ್ಲಿ ಡೈಮಂಡ್ ಫೆಸ್ಟ್

ಬೆಳ್ತಂಗಡಿ: ಮುಳಿಯದಲ್ಲಿ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 5 ರವರೆಗೆ ಡೈಮಂಡ್ ಫೆಸ್ಟ್ ನಡೆಯಲಿದೆ.


ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಇವರು ನೆರವೇರಿಸಿ, ಮುಳಿಯ ಹಾಗೂ ರೋಟರಿ ಕ್ಲಬ್ ಜೊತೆಗಿರುವ ಬಾಂಧವ್ಯವನ್ನು ವ್ಯಕ್ತ ಪಡಿಸಿ, ಶುಭಕೋರಿದರು.ಹಾಗೂ ಅತಿಥಿಗಳಾದ ಜಿ.ಪಂ.ಮಾಜಿ ಸದಸ್ಯೆ ಸೌಮ್ಯ ಜಯಂತ್ ಗುರಿಪಳ್ಳಯ ಇವರು ಹಬ್ಬದ ಬಗ್ಗೆ ಸಂತೋಷ ವ್ಯಕ್ತ ಪಡಿಸಿ, ಶುಭಕೋರಿದರು.

ಗೌರವ ಭಾಷಣವನ್ನು ಅಶೋಕ್ ಡಿ.ಬಂಗೇರ ರವರು ನೆರವೇರಿಸಿ, ಆಗಮಿಸಿದ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮಾ ರವರು ಡೈಮಂಡ್ ಫೆಸ್ಟ್ ಹಾಗೂ ವಿವಿಧ ರೀತಿಯ ಡೈಮಂಡ್ ಹಾಗೂ ಆಭರಣಗಳ ಬಗ್ಗೆ ಪ್ರಸ್ತಾವನೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಕ್ಯೂರೆಂಟ್ ಮ್ಯಾನೇಜರ್ ಲೋಕೇಶ್ ಕುಮಾರ್ ಉಪಸ್ಥಿತರಿದ್ದರು.ದಿನೇಶ್ ಕುಮಾರ್ ಧನ್ಯವಾದವಿತ್ತರು.

Exit mobile version