ಬೆಳ್ತಂಗಡಿ: ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಇದರ ಸಹಭಾಗಿತ್ವದಲ್ಲಿ ಕನ್ಯಾಮರಿಯಮ್ಮನವರ ಹುಟ್ಟುಹಬ್ಬ(ತೆನೆ ಹಬ್ಬ) ವನ್ನು ಹೋಲಿ ರಿಡೀಮರ್ ಸಭಾಂಗಣದಲ್ಲಿ ಸೆ.10ರಂದು ಆಚರಿಸಲಾಯಿತು.
ಬೆಳ್ತಂಗಡಿ ಚರ್ಚಿನ ಮುಖ್ಯಗುರುಗಳಾದ ವಂ| ಫಾ| ವೊಲ್ಟರ್ ಡಿಮೆಲ್ಲೊ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಅಧ್ಯಕ್ಷೆ ಗ್ರೇಸಿ ಲೋಬೊ, ಮುಖ್ಯ ಅತಿಥಿಯಾಗಿ ವಂ| ಫಾ | ಜೋನ್ ಪಿಂಟೊ, ವಂ| ಫಾ| ವಿನೋದ್ ಮಸ್ಕರೇನ್ಹಸ್, ಚರ್ಚ್ ಶಾಲೆಯ ಮುಖ್ಯೋಪಾದ್ಯಾಯರಾದ ವಂ| ಫಾ| ಕ್ಲಿಫರ್ಡ್ ಸೈಮನ್ ಪಿಂಟೊ, ಸಿ.ಜೆಸಿಂತಾ ಬರೆಟ್ಟೊ ಪೋಸ್ಟ್ ಮಾಸ್ಟರ್ ಲೀನಾ ಪ್ಲೋರಿನ್ ಕ್ರಾಸ್ತಾ ಗುರುವಾಯನಕೆರೆ, ಬೆಳ್ತಂಗಡಿ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ವಾಲ್ಟರ್ ಮೋನಿಸ್, ಆಯೋಗಗಳ ಸಂಯೋಜಕಿ ಪೌಲಿನ್ ರೇಗೊ, ಕಥೋಲಿಕ್ ಸ್ತ್ರೀ ಮಂಡಳಿ ಬೆಳ್ತಂಗಡಿ ವಲಯ ಕಾರ್ಯದರ್ಶಿ ಅಶು ಜುಲಿಯೇಟ್ ಕ್ರಾಸ್ತಾ ಹಾಗೂ ಧರ್ಮ ಭಗಿನಿಯರು ಉಪಸ್ಥಿತರಿದ್ದರು.
ಅಧ್ಯಕ್ಷೆ ಗ್ರೇಸಿ ಲೋಬೊ ಪ್ರಾಸ್ತವಿಕ ನುಡಿಯೊಂದಿಗೆ ಸ್ವಾಗತಿಸಿದರು.ವಂ| ಫಾ | ಜೋನ್ ಪಿಂಟೊರವರು ಸಂದೇಶ ನೀಡಿದರು, ವಂ| ಫಾ| ವಿನೋದ್ ಮಸ್ಕರೇನ್ಹಸ್ ಹಾಗೂ ವಂ| ಫಾ| ಜೇಮ್ಸ್ ಡಿ’ಸೋಜ ರವರು ಶುಭ ಹಾರೈಸಿದರು, ಗುರುವಾಯನಕೆರೆ ಪೋಸ್ಟ್ ಮಾಸ್ಟರ್ ಲೀನಾ ಪ್ಲೋರಿನ್ ಕ್ರಾಸ್ತಾ ರವರು ಪೋಸ್ಟ್ ಆಫೀಸ್ ನಲ್ಲಿ ಮಹಿಳೆಯರಿಗೆ ಸಿಗುವ ಸೌಲಭ್ಯ ಹಾಗೂ ಆದರ ಸದ್ಭಳಕೆಯ ಬಗ್ಗೆ ಮಾಹಿತಿ ನೀಡಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ನಂತರ ಬಹುಮಾನ ವಿತರಣೆ ನಡೆಯಿತು.
300ಕ್ಕೂ ಹೆಚ್ಚು ಕಥೋಲಿಕ್ ಸ್ತ್ರೀಯರು ಬಾಗಿಯಾಗಿದ್ದರು.ಕಾರ್ಯದರ್ಶಿ ಅಶು ಜುಲಿಯೇಟ್ ಕ್ರಾಸ್ತಾ ವಾರ್ಷಿಕ ವರದಿಯನ್ನು ವಾಚಿಸಿದರು.ಕು.ಶರೂನ್ ಪಿಂಟೊ ಹಾಗೂ ಲೀನಾ ಕ್ರಾಸ್ತಾ ರ‍್ವಾ ಕಾರ್ಯಕ್ರಮವನ್ನು ನಿರೂಪಿಸಿದರು.ಜೆತ್ರಡ್ ಡಿ’ಸೋಜ ವಂದಿಸಿದರು.