Site icon Suddi Belthangady

ಭಾರತೀಯ ಮಜ್ದೂರ್ ಸಂಘ ಕೊಕ್ಕಡ ವಲಯ ಇದರ ವತಿಯಿಂದ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ

ಕೊಕ್ಕಡ: ಸೆಪ್ಟೆಂಬರ್ 17 ರಂದು ಭಾರತೀಯ ಮಜ್ದೂರ್ ಸಂಘ ಕೊಕ್ಕಡ ವಲಯ ಇದರ ವತಿಯಿಂದ ವಿಶ್ವಕರ್ಮ ಜಯಂತಿ ಪ್ರಯುಕ್ತ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಿಗುವ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಗಾರ ಮತ್ತು ಸಂಘದ ನೂತನ ಕಛೇರಿಗೆ ಬೇಕಾಗುವ ಸಾಮಾಗ್ರಿಗಳನ್ನು ನೀಡಿದ ದಾನಿಗಳಿಗೆ ಗೌರವರ್ಪಣೆಯನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಪ್ರತಾಪ್ ಸಿಂಹ ನಾಯಕ್ ರವರು ಸಂಘಟನೆಯೇ ಶಕ್ತಿ ಎಲ್ಲಾ ವಿಭಾಗಗಳಲ್ಲಿಯೂ ಕೋಟ್ಯಂತರ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ ಅವರ ಕ್ಷೇಮಭಿವೃದ್ಧಿಗೆಂದೆ ಭಾರತೀಯ ಮಜ್ದೂರ್ ಸಂಘ ಶ್ರಮಿಸುತ್ತಿದೆ ಕೊಕ್ಕಡ ವಲಯದ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ವಿಶ್ವಕರ್ಮ ಜಯಂತಿಯದು ನಮ್ಮ ದೇಶದ ಕರ್ಮಯೋಗಿಯಾದ ನರೇಂದ್ರ ಮೋದಿಯವರ ಜನ್ಮದಿನ ಮೋದಿಯವರ ಸರ್ಕಾರ ಬಂದ ಮೇಲೆ ಮತ್ತು ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಕಾರ್ಮಿಕರಿಗೆ ರೈತ ವರ್ಗಕ್ಕೆ ಹಲವಾರು ಸೌಲಭ್ಯಗಳು ಸಿಗುತ್ತಿತ್ತು ಮತ್ತು ಅಸಂಘಟಿತವಲಯವನ್ನು ರೈತರನ್ನು ಆರ್ಥಿಕವಾಗಿ ಸದೃಢರಾನ್ನಾಗಿ ಮಾಡಿದ್ದರು ಆದರೆ ಇಂದಿನ ರಾಜ್ಯ ಸರ್ಕಾರ ಆ ಸೌಲಭ್ಯವನ್ನೆಲ್ಲ ನಿಲ್ಲಿಸಿದೆ ಈಗಿನ ಸರ್ಕಾರಕ್ಕೆ 100ಮೀಟರ್ ರಸ್ತೆ ಮಾಡಲು ಸಾಧ್ಯವಾಗಿಲ್ಲ ಅಭಿವೃದ್ಧಿ ಕುಂಟಿತಗೊಂಡಿದೆ ಎಂದರು ಸನ್ಮಾನ್ಯ ನರೇಂದ್ರ ಮೋದಿಯವರ ಸರಕಾರದಲ್ಲಿ ಆಹಾರ ಪೂರಯ್ಕೆ ಜಲಜೀವನ್ ಯೋಜನೆ ಮೂಲಕ ಪ್ರತಿ ಮನೆಗೆ ನೀರು, ವಿದ್ಯುತ್ ಅಯುಷ್ಮಾನ್ ಮೂಲಕ 5ಲಕ್ಷ ವರೆಗೆ ಚಿಕಿತ್ಸೆಗೆ ಹಣ ಜನಔಷದಿ ಮುಂತಾದ ಹತ್ತು ಹಲವು ಯೋಜನೆ ಮೂಲಕ ಭಾರತವನ್ನು ಸುಭ್ರದ್ರವಾಗಿ ಇರಿಸಿದ್ದಾರೆ 13.35ಕೋಟಿಯಷ್ಟು ಜನ ಬಡತನ ರೇಖೆಯಿಂದ ಮೇಲೆದ್ದು ಬಂದಿದ್ದಾರೆ ಎಂದರು. ಕೌಶಲ್ಯದ ಮೂಲಕ ದೇಶಕಟ್ಟುವ ಕೆಲಸ ಆಗಬೇಕು. ಹಾಗೆಯೇ ಕೇಂದ್ರ ಸರಕಾರ ವಿಶ್ವಕರ್ಮ ಜಯಂತಿಯ ಸಂಧರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆಂದೇ ನೂತನ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ಹಾಗೆಯೇ ಇನ್ನೊರ್ವ ಅತಿಥಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದರ ಅಧ್ಯಕ್ಷ ಕೃಷ್ಣ ಭಟ್ ರವರು ಮಾತನಾಡಿ ಎಲ್ಲಾ ನಿರ್ಮಾಣಗಳಿಗೂ ವಿಶ್ವಕರ್ಮರೆ ನಾಂದಿ ಭಾರತೀಯ ಮಜ್ದೂರ್ ಸಂಘ ಕೂಡ ಸಂಘದಿಂದ ಪ್ರೆರೇಪಿತವಾಗಿ ಸ್ಥಾಪನೆಯಾದ ಸಂಘ ಭಾರತದಲ್ಲಿ ಅತೀ ಹೆಚ್ಚು ಸದಸ್ಯತ್ವವನ್ನು ಹೊಂದಿರುವ ಸಂಘ ಕೂಡ ಇದು ಮತ್ತು ದೇಶದ ಬೆಳವಣಿಗೆಯಲ್ಲಿ ಈ ಸಂಘ ಉತ್ತಮ ರೀತಿಯಲ್ಲಿ ಕ್ಯೆಜೋಡಿಸಿಕೊಂಡು ಬಂದಿದೆ ಕೇಂದ್ರ ಸರಕಾರ ಕೌಶಲ್ಯ ವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದೂ ಈ ಸಂಧರ್ಭದಲ್ಲಿ ನಮ್ಮ ಮುಂದಿನ ಪೀಳಿಗೆಯನ್ನು ಸಜ್ಜುಗೊಳಿಸಬೇಕು. ಹಾಗೆಯೇ ಮೇ 1ರ ಕಾರ್ಮಿಕ ದಿನಾಚರಣೆಗೆ ಯಾವ ಅರ್ಥವು ಇಲ್ಲ ನಾವು ಈ ಮಣ್ಣಿನ ಮಕ್ಕಳು ವಿಶ್ವಕರ್ಮ ಜಯಂತಿಯಂದೇ ಕಾರ್ಮಿಕ ದಿನವನ್ನಾಗಿ ಆಚರಿಸಬೇಕು ಎಂದರು.

ಭಾರತೀಯ ಮಜ್ದೂರ್ ಸಂಘದ ನಿಕಟಪೂರ್ವ ರಾಜ್ಯಧ್ಯಕ್ಷ ವಿಶ್ವನಾಥ ಶೆಟ್ಟಿಯವರು ಮಾತನಾಡಿ ಈ ಕಾರ್ಮಿಕ ಸಂಘಟನೆಯನ್ನು ಕಟ್ಟಲು ತುಂಬಾ ಶ್ರಮಪಟ್ಟಿದ್ದೇವೆ.ಈ ಸಂಘವು ಇನ್ನು ಸಶಕ್ತಗೊಂಡು ಉತ್ತಮವಾಗಿ ಮುನ್ನಡೆದುಕೊಂಡು ಹೋಗಬೇಕು ಮಜ್ದೂರ್ ಸಂಘ ಕಾರ್ಮಿಕರ ಪರ ಸದಾ ಇರುತ್ತದೆ ಬೀಡಿ ಕಾರ್ಮಿಕರು ಮಜ್ದೂರ್ ಸಂಘಟನೆ ಜೊತೆ ಇನ್ನು ಪೂರ್ಣ ಪ್ರಮಾಣದಲ್ಲಿ ಕ್ಯೆಜೊಡಿಸಿಲ್ಲ ಜೋಡಿಸಿದರೆ ಉತ್ತಮ ಸೌಲಭ್ಯಮಾಡಿ ಕೊಡಲಾಗುವುದು ಎಂದರು.

ಇನ್ನೊರ್ವ ಅತಿಥಿ ಯಶಸ್ವಿ ಉಧ್ಯಮಿ ಬಾಲಕೃಷ್ಣ ನೈಮಿಶ ರವರು ಮಾತನಾಡಿ ಈ ಭಾಗದ ಎಲ್ಲಾ ಕಾರ್ಮಿಕರಿಗೆ ಅನುಕೂಲವಾಗಲು ಕೊಕ್ಕಡದಲ್ಲಿ ಕಛೇರಿ ಆರಂಭವಾಗಿದೆ ಕಾರ್ಮಿಕರು ಕಷ್ಟ ಪಟ್ಟು ದುಡಿಯುತ್ತೀರಿ ಯಾರು ದುಶ್ಚಟಕ್ಕೆ ಬಲಿಯಾಗದೆ ನಿಮ್ಮ ನಿಮ್ಮ ಸಂಸಾರವನ್ನು ಸದೃಢವಾಗಿರಿಸಿ ಕೊಳ್ಳಬೇಕು ಹಾಗೆಯೇ ಸಂಘದ ಸದಸ್ಯತ್ವವನ್ನು ಎಲ್ಲರು ಪಡೆಯುವಂತೆ ಮಾಡಿ ಎಂದರು.

ಸೇವಾ ಸಹಕಾರಿ ಬ್ಯಾಂಕ್ ಕೊಕ್ಕಡ ಇದರ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ರವರು ಮಾತನಾಡಿ ಕಳೆದ 25 ವರ್ಷಗಳ ಹಿಂದೆ ಕೊಕ್ಕಡ ಭಾಗದಲ್ಲಿ ಮಜ್ದೂರ್ ಸಂಘದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ ಬಹಳ ಪ್ರಯತ್ನ ಪಟ್ಟು ಮಜ್ದೂರ್ ಸಂಘ ಕಟ್ಟಿದ್ದೇವೆ ಕೂಲಿ ಕಾರ್ಮಿಕರಿಗೆ ಸಿಗಬೇಕಾದ ನ್ಯಾಯವನ್ನು ಭಾರತೀಯ ಮಜ್ದೂರ್ ಸಂಘ ದೊರಕಿಸಿಕೊಟ್ಟಿದೆ ಕೂಲಿ ಕಾರ್ಮಿಕರನ್ನ, ಕೃಷಿಕರನ್ನು ಗುರುತಿಸುವ ಕೆಲಸ ನಡೆದದ್ದೇ ನರೇಂದ್ರ ಮೋದಿಯವರು ಪ್ರಧಾನಿ ಆದಮೇಲೆ ಎಂದರು. ಸಂಘದ ಸೌಲಭ್ಯವನ್ನು ಎಲ್ಲರು ಪಡೆದುಕೊಳ್ಳಬೇಕು ಯಾರು ವಂಚಿತಾರಾಗಬಾರದು ಮಜ್ದೂರ್ ಸಂಘ ಒಂದು ಉತ್ತಮವಾದ ಸಂಘ ಮಾಧ್ಯಮದವರು ನಮ್ಮ ಸಂಘದ ಉತ್ತಮ ಕೆಲಸವನ್ನು ಪ್ರೂತ್ಸಾಹಿಸಬೇಕು ಎಂದರು.

ಈ ಸಂದರ್ಭದಲ್ಲಿ ದಾನಿಗಳಾದ ಕೃಷ್ಣಭಟ್, ಬಾಲಕೃಷ್ಣ ನೈಮಿಷ, ಕುಶಾಲಪ್ಪ ಗೌಡ ಪೂವಾಜೆ, ಗಣೇಶ್ ಕುಲಾಯಿ ಕೊಕ್ಕಡ, ಮಂಜುನಾಥ ವಕೀಲರು, ಸಂತೋಷ್ ಪಾಲೆತ್ತಡಿ ಕಳೆಂಜ, ಕುಶಲ ಕರ್ಮಿಗಳಾದ ಕಿಟ್ಟ ಮೇಸ್ತ್ರೀ ಕಡೀರ, ಶ್ರೀನಿವಾಸ ಆಚಾರ್ಯ ಕಾಪಿನಬಾಗಿಲು, ಮಜ್ದೂರ್ ಸಂಘಕ್ಕೆ ಮೊದಲಿಂದಲೂ ದುಡಿದ ಶ್ರೀಮತಿ ವನಜಾಕ್ಷಿ ಕೊಕ್ಕಡ, ವಿವಿಧ ವಸ್ತುಗಳನ್ನು ನೀಡಿದ ಯೋಗಿಶ್ ಆಲಂಬಿಲ, ಖಾಲಿದ್ ಕೊಕ್ಕಡ, ಯೋಗೀಶ್ ನಿಡ್ಲೆ, ಶಶಿಚಂದ್ರ ಅರಸಿನಮಕ್ಕಿ, ರಾಜೇಶ್ ಎಂ.ಕೆ ಕಾರ್ಯತಡ್ಕ, ಸರೋಜ, ಗಿರೀಶ್, ಮಹಾವೀರ ಕಾಲೋನಿ ಕೊಕ್ಕಡ, ಬಿ.ಎಂಎಸ್ ರಿಕ್ಷಾ ಚಾಲಕ ಸಂಘ ಕೊಕ್ಕಡ,ಬಿಎಂಎಸ್ ರಿಕ್ಷಾ ಚಾಲಕರ ಸಂಘ ಕಳೆಂಜ ರವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಇನ್ನುಳಿದಂತೆ ಯೋಗೀಶ್ ಆಳಂಬಿಲ, ಪಂಚಾಯತ್ ಅಧ್ಯಕ್ಷೆ ಬೇಬಿ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಕ್ಕಡ ವಲಯ ಭಾರತೀಯ ಮಜ್ದೂರ್ ಸಂಘದ ಸಂಯೋಜಕ ಚಂದ್ರಶೇಖರ ಗಾಣಗಿರಿ ಸ್ವಾಗತಿಸಿದರು.ಬೆಳ್ತಂಗಡಿ ತಾಲೂಕು ಸಂಯೋಜಕ ಸಾಂತಪ್ಪ ಧನ್ಯವಾದವಿತ್ತರು.ಭಾರತೀಯ ಮಜ್ದೂರ್ ಸಂಘ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್, ಪ್ರಾಸ್ತಾವಿಕವಾಗಿ ಮಾತನಾಡಿದರು.ಕೇಶವ ಹಲ್ಲಿಂಗೇರಿ ಕಾರ್ಯಕ್ರಮ ನಿರೂಪಿಸಿದರು.

Exit mobile version