ಪಿಲಿಗೂಡು: ಶ್ವೇತಾ ಸಮೂಹ ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ರಜತ ಮಹೋತ್ಸವವು ಸೆ.17 ರಂದು ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಪಿಲಿಗೂಡುವಿನಲ್ಲಿ ನಡೆಯಿತು.
ದ.ಕ.ಸ.ಹಾಲುಒಕ್ಕೂಟ ಮಂಗಳೂರಿನ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿ ಮಹಿಳೆಯರು ಸ್ವಾವಲಂಭಿಯಾಗುವಾಗ ಸಮಾಜದಲ್ಲಿ ಮುನ್ನಡೆಯಲು ಸಾಧ್ಯ.ಕೌಟುಂಬಿಕ ಜೀವನ, ಕೃಷಿಯಲ್ಲಿ ಕ್ಷೇತ್ರದಲ್ಲಿ ಪಾಲ್ಗೊಂಡು ನಮ್ಮ ಸಂಸ್ಕೃತಿಯನು ಉಳಿಸಿ ಬೆಳೆಸುವ ಕಾರ್ಯವಾದರೆ ಆಧುನಿಕ ಭಾರತಕ್ಕೆ ನಾವು ಕೊಡುವ ಕೊಡುಗೆ.ನಮ್ಮ ವಿಚಾರಧಾರೆಗಳು, ಹಳ್ಳಿ ಬದುಕಿನ ಸೊಬಗನ್ನು ಯುವ ಪೀಳಿಗೆ ತಿಳಿಸಬೇಕು ಎಂದು ಹೇಳಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರ ಹಾಗೂ ಹೈನುಗಾರಿಕೆಗೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ಮೂಲಕ ದ.ಕ.ಜಿಲ್ಲೆಯಲ್ಲಿ ಹೈನುಗಾರಿಕೆ ಸಮೃದ್ಧವಾಗಿ ಬೆಳೆದು ನಿಂತಿದೆ. ಹೈನುಗಾರಿಕೆ ಕ್ಷೇತ್ರದಲ್ಲಿ ಯುವ ಜನತೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವಂತಾಗಬೇಕು.ಹೈನುಗಾರಿಕೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ತಿಳಿಸಿದ ಅವರು.ಸಂಘದ ಕಟ್ಟಡ ಮುಂಭಾಗದಲ್ಲಿ ಇಂಟರ್ ಲಾಕ್ ಅಳವಡಿಕೆ 75 ಸಾವಿರ ರೂಪಾಯಿ ಹಾಗೂ ಕೊಳವೆ ಬಾವಿ ನಿರ್ಮಾಣಕ್ಕೆ 25 ಸಾವಿರ ರೂಪಾಯಿ ಜಿಲ್ಲಾ ಒಕ್ಕೂಟದ ವತಿಯಿಂದ ನೀಡಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಕುಸುಮಾವತಿ ಮಾತನಾಡಿ ಸಂಘದ ಬೆಳವಣಿಗೆ ಎಲ್ಲರೂ ಸಹಕರಿಸಬೇಕು.ಕೃಷಿಕರು ಗುಣಮಟ್ಟದ ಹಾಲನ್ನು ಡಿಪ್ಪೋಗೆ ಹಾಕುವ ಮೂಲಕ ಸಹಕರಿಸಬೇಕು ಹಾಗೇಯೇ ಹೈನುಗಾರಿಕೆ ಕ್ಷೇತ್ರವನ್ನು ವೃದ್ಧಿಸುವ ಕಾರ್ಯವನ್ನು ನಾವು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಸ್ಥಾಪಕಾಧ್ಯಕ್ಷೆ ರಾಜಶ್ರೀ ಎಸ್ ಹೆಗ್ಡೆ, ರೈತಬಂಧು ಆಹಾರೋಧ್ಯಮ ಮಾಲಕ ಶಿವಶಂಕರ್ ನಾಯಕ್, ಉದ್ಯಮಿ ಕಿರಣ್ ಚಂದ್ರ, ದ.ಕ.ಸ.ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್ ಎಂ, ಪಶುವೈದ್ಯಾಧಿಕಾರಿ ಡಾ.ಗಣಪತಿ, ಬೆಳ್ತಂಗಡಿ ದ.ಕ.ಸ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪಿ ಕಾಮತ್, ಕಣಿಯೂರು ಗ್ರಾ.ಪಂ.ಮಾಜಿ ಪ್ರಧಾನರಾದ ಸುದರ್ಶನ ಹೆಗ್ಡೆ, ಸಂಘದ ಉಪಾಧ್ಯಕ್ಷೆ ಸುನಂದ ಹಾಗೂ ನಿದೇರ್ಶಕರುಗಳಾದ ಜಾನಕಿ, ಮಮತಾ, ಪ್ರೇಮಾ, ನಳಿನಿ, ಗಿರಿಜಾ, ಕುಸುಮಾವತಿ, ರಾಜೀವಿ, ವಾರಿಜಾ, ಇಂದಿರಾ ಹಾಗೂ ಪ್ರೇಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾರತಿ ಕೆ.ವಾರ್ಷಿಕ ವರದಿ ಮಂಡಿಸಿದರು.ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಸ್ವಾಗತಿಸಿ, ಸಂಘದ ನಿರ್ದೇಶಕಿ ಚೈತ್ರಾ ಎಂ.ಜಿ.ವಂದಿಸಿ, ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಂಘದ ಸಿಬ್ಬಂದಿಗಳಾದ ದಿವ್ಯಶ್ರೀ, ದೇವಕಿ ಮತ್ತು ಆನಂದ ಉಪಸ್ಥಿತರಿದ್ದರು.ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕಸ್ತೂರ್ಬಾ ಮೆಡಿಕಲ್ ಕಾಲೇಜು ಅತ್ತಾವರ ಮಂಗಳೂರು ಹಾಗೂ ಪ್ರಾಂಶುಪಾಲರು, ದಂತ ಮಹಾವಿದ್ಯಾಲಯ ನಿಟ್ಟೆ ಇದರ ಜಂಟಿ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸೆ ಮತ್ತು ವೈದ್ಯಕೀಯ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.ಚಾಪರ್ಕ ಕಲಾವಿದರಿಂದ ತುಳು ಹಾಸ್ಯಮಯ ನಾಟಕ ನಾಯಿದ ಬೀಲ ಪ್ರದರ್ಶನ ಗೊಂಡಿತು.
ಸಂಘದ ಹಾಲಿ ಹಾಗೂ ಮಾಜಿ ಅಧ್ಯಕ್ಷ, ಉಪಾಧ್ಯಕ್ಷ, ನಿದೇರ್ಶಕರುಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಹಾಗೂ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಝೊಹೋರ, ಸುಮ ಮತ್ತು ಪ್ಲೇವಿ ಡೇಸಾ ಅವರನ್ನು ಗೌರವಿಸಲಾಯಿತು.ಹೈನುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಇಬ್ರಾಹಿಂ ಅವರನ್ನು ಸನ್ಮಾನಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷೆ ದೇವಿ ತಾಯಿ ಎನ್ ಅವರ ಸ್ಮರಣಾರ್ಥವಾಗಿ ಅವರ ಪುತ್ರ ಉದ್ಯಮಿ ಕಿರಣ್ ಪುಷ್ಪಗಿರಿ ರವರು ಅನ್ನದಾನ ಸೇವೆಯನ್ನು ನೀಡಿದ ಅವರು ಸ್ಥಳೀಯ ಲಾರಿ ಚಾಲಕ ಸುಜಯ ಶೆಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಚಿಕಿತ್ಸೆಗೆ 50 ಸಾವಿರ ರೂಪಾಯಿ ದೇಣಿಗೆಯನ್ನು ಹಸ್ತಾಂತರಿಸಲಾಯಿತು.ಇವರ ಈ ಕಾರ್ಯವನ್ನು ಮೆಚ್ಚಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.