Site icon Suddi Belthangady

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ- ಶೇ.9.50 ಡಿವಿಡೆಂಟ್ ಘೋಷಣೆ

ಕೊಯ್ಯೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಯ್ಯೂರು ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ನವೀನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೆ.18 ರಂದು ಪಂಚದುರ್ಗಾ ಸಹಕಾರಿ ಸಭಾಭವನ ಆದೂರುಪೆರಾಲ್ ಕೊಯ್ಯೂರುನಲ್ಲಿ ನಡೆಯಿತು.

ವರದಿ ಸಾಲಿನಲ್ಲಿ ಸಂಘವು ರೂ 137.95 ಕೋಟಿ ವ್ಯವಹಾರ ಮಾಡಿದ್ದು, 53.26 ಲಕ್ಷ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.9.50 ಡಿವಿಡೆಂಟ್ ಘೋಷಿಸಲಾಯಿತು.ಸಂಘವು ವ್ಯವಹಾರದೊಂದಿಗೆ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ನವೀನ್ ಕುಮಾರ್ ಹೇಳಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸಂಜೀವ ಎಂ.ಕೆ, ಕಾರ್ಯನಿರ್ವಹಣಾಧಿಕಾರಿ ಅನಂತ ಕೃಷ್ಣ ಭಟ್, ನಿರ್ದೇಶಕರರಾದ ಅಶೋಕ್ ಭಟ್, ಉಜ್ವಲ್ ಕುಮಾರ್, ಎನ್.ಪರಮೇಶ್ವರ ಗೌಡ, ರವೀಂದ್ರನಾಥ ಪಿ, ಪುರುಷೋತ್ತಮ, ಡೀಕಯ್ಯ ಪೂಜಾರಿ, ಗುಲಾಬಿ, ರೇವತಿ, ಯತೀಶ, ಕೇಂದ್ರ ಬ್ಯಾಂಕಿನ ಪ್ರತಿನಿಧಿ ಸಂದೇಶ ಕುಮಾರ್ ಎಂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೊಯ್ಯುರು ಸಿಎ ಬ್ಯಾಂಕಿನ ಸಿಬ್ಬಂದಿಗಳಾದ ಮಮತಾ ರೈ, ಕೇಶವ ಕೆ, ವಿನಾಯಕ ಬಿ, ಸುಕನ್ಯಾ ಬಿ.ಜೆ, ಲೋಕೇಶ್, ಯತೀಶ್, ದಿಲೀಪ್ ಕುಮಾರ್, ಸುದರ್ಶನ, ಸ್ವಸಹಾಯ ಪ್ರೇರಕಿ ಚಂಪಾ, ದೈನಂದಿನ ಠೇವಣಿ ಸಂಗ್ರಾಹಕಿ ಗೀತಾ, ಸರಾಫರು ಯೋಗೀಶ್ ಆಚಾರ್ಯ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Exit mobile version