ಪೆರಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪೆರಾಡಿ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ ಇವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಸೆ.17 ರಂದು ನಡೆಯಿತು.ಸಂಘದಲ್ಲಿ 3018ಸದಸ್ಯರನ್ನು ಹೊಂದಿದ್ದು ಒಟ್ಟು ರೂ. 85,57,06,037 ದುಡಿಯುವ ಬಂಡವಾಳ ಹೊಂದಿರುತ್ತದೆ.
ಈ ಸಾಲಿನಲ್ಲಿ ಒಟ್ಟು ರೂ. 48ಕೋಟಿ ಠೇವಣಿ ಸಂಗ್ರಹಗೊಂಡು ರೂ. 340 ರಷ್ಟು ವಾರ್ಷಿಕ ವ್ಯವಹಾರ ನಡೆಸಿ 71 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 21%ಡಿವಿಡೆಂಡ್ ಘೋಷಿಸಿದರು. ಸಂಘದ ಪೆರಿಂಜೆ ಶಾಖೆಯಲ್ಲಿ ವ್ಯವಸ್ಥಾಪರಾಗಿದ್ದ ಸುಮಾರು 37ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಹೇಂದ್ರವರ್ಮಾ ಪಿ. ಇವರನ್ನು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಇವರನ್ನು ಪಡ್ಯಾರಬೆಟ್ಟ ವಿಕಾಸ್ ಜೈನ್ ರವರು ಸನ್ಮಾನಿಸಿ ಗೌರವಿಸಿದರು.
ನಿವೃತ್ತ ಮುಖ್ಯ ಕಾರ್ಯನಿವಣಾಧಿಕಾರಿ ಎಸ್ ಆರ್ ಪಟವರ್ಧನ್, ಮಾಜಿ ಅಧ್ಯಕ್ಷ ಪಿ. ಕೆ. ರಾಜು ಪೂಜಾರಿ, ಸಹಕಾರಿ ಅಧಿಕಾರಿ ಪ್ರತಿಮಾ, ಎಂ.ಕೆ.ಆರಿಗ, ಮಹೇಂದ್ರವರ್ಮ ಇವರ ಪತ್ನಿ ಶ್ರೀಮತಿ ಅನೂಪ, ಸಂಘದ ಉಪಾಧ್ಯಕ್ಷೆ ಶ್ರೀಮತಿ ದೇವಕಿ ಶೆಟ್ಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಕ್ ಲತೀಫ್ , ನಿರ್ದೇಶಕರಾದ ಎನ್. ಸೀತಾರಾಮ ರೈ, ಪ್ರವೀಣ್ ಗಿಲ್ಬರ್ಟ್ ಪಿಂಟೊ, ಪುತ್ತು ನಾಯ್ಕ, ಹರಿಪ್ರಸಾದ್, ಧರ್ಣಪ್ಪ ಪೂಜಾರಿ, ಶ್ರೀಮತಿ ಸುಜಾತ, ಶ್ರೀಪತಿ ಉಪಾಧ್ಯಾಯ , ರಾಜೇಶ್ ಶೆಟ್ಟಿ, ಕೃಷ್ಣಪ್ಪ , ಡಿ. ಸಿ. ಸಿ. ಬ್ಯಾಂಕ್ ಪ್ರತಿನಿಧಿ ಸಂದೇಶ್ ಕುಮಾರ್ ಉಪಸ್ಥಿತರಿದ್ದರು.
ಸಿಬಂದಿಗಳಾದ ಶ್ರೀಮತಿ ಹೇಮಾ ಶ್ರೀಮತಿ ರೋಹಿಣಿ , ವೀರೇಂದ್ರ ಕುಮಾರ್ , ಶ್ರೀಮತಿ ಮಮತಾ, ಲಕ್ಷ್ಮಣ, ಶ್ರೀಮತಿ ಕವಿತಾ ,, ಶ್ರೀಮತಿ ರಮ್ಯಾ , ಶ್ರೀಮತಿ ನಳಿನಿ, ಸುಜಿತ್ ಕುಮಾರ್, ಮನೋಜ್ ಕುಮಾರ್, ಶ್ರೀಮತಿ ಹರ್ಷಲಾ ವಿ. ಜೈನ್ ಸಹಕರಿಸಿದರು.
ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಕರ್ ಬುಣ್ಣನ್, ಉಪಾಧ್ಯಕ್ಷ ಶುಭರಾಜ್ ಹೆಗ್ಡೆ , ನಿವೃತ್ತ ಅಭಿವೃದ್ಧಿ ಅಧಿಕಾರಿ ವಾಸುದೇವ ನಾಯಕ್, ಕಾಶಿಪಟ್ಣ ಮಾಜಿ ಅಧ್ಯಕ್ಷೆ ಶಿಲ್ಪಾ, ಸಂಘದ ಮಾಜಿ, ಅಧ್ಯಕ್ಷರುಗಳು, ನಿರ್ದೇಶಕರು, ಸದಸ್ಯರುಗಳು,ಮರೋಡಿ, ಕಾಶಿಪಟ್ಣ, ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರು, ಉಪಸ್ಥಿತರಿದ್ದರು.
5ಗ್ರಾಮ ಗಳ ವ್ಯಾಪ್ತಿಯ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಂಘದ ಸದಸ್ಯರು ಮೃತ ಪಟ್ಟ ಕುಟುಂಬಕ್ಕೆ ಆರ್ಥಿಕ ನೆರವು, 135ವಿಕಲ ಚೇತನ ರಿಗೆ ಆರ್ಥಿಕ ನೆರವು ವಿತರಿಸಲಾಹಿತು. ಮುಖ್ಯ ಕಾರ್ಯನಿರ್ವಣಾಧಿಕಾರಿ ಯು. ಶೇಕ್ ಲತೀಫ್ ವರದಿ ಮಂಡಿಸಿದರು. ನಿರ್ದೇಶಕ ಶ್ರೀಪತಿ ಉಪಾದ್ಯಾಯ ವಂದಿಸಿದರು.