Site icon Suddi Belthangady

ಪಿಲಿಗೂಡು: ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ- 5.92 ಲಕ್ಷ ನಿವ್ವಳ ಲಾಭ- ಶೇ.25 ಡಿವಿಡೆಂಟ್ ವಿತರಣೆ

ಪಿಲಿಗೂಡು: “ಶ್ವೇತ ಸಮೂಹ” ಪಿಲಿಗೂಡು ಹಾಲು ಉತ್ಪಾದಕರ ಸಹಕಾರಿ ಸಂಘದ 2022-23 ನೇ ವಾರ್ಷಿಕ ಸಾಮಾನ್ಯ ಸಭೆ ಸೆ.17 ರಂದು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪಿಲಿಗೂಡು ಕ್ರೀಡಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ “ರಜತ ಮಹೋತ್ಸವ” ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯುತ್ತದೆ.

ಸಂಘದ ಅಧ್ಯಕ್ಷರಾದ ಶ್ರೀಮತಿ ಕುಸುಮಾವತಿ ಕೆ. ಸಭೆಯ ಅಧ್ಯಕ್ಷೆ ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಭಾರತಿ ಕೆ. ವಾರ್ಷಿಕ ವರದಿಯನ್ನು ವಾಚಿಸಿದರು. 2022-23 ನೇ ಸಾಲಿನ ಒಟ್ಟು ವ್ಯವಹಾರ 64,25,937.07 ನಡೆಸಿತು.

ನಿವ್ವಳ ಲಾಭ 5,92,575.52 ಗಳಿಸಿತು. ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ರಾಜೇಶ್ ಕಾಮತ್ ಪಿ. ಮಾತನಾಡುತ್ತಾ ಒಕ್ಕೂಟದ ಸದಸ್ಯರಿಗೆ ದೊರೆಯುವ ಅನುದಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಸಂಘದ ನಿರ್ದೇಶಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಗೂ ಸದಸ್ಯರು ಭಾಗವಹಿಸಿದರು.

Exit mobile version