ನಾರಾವಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಾರಾವಿ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎನ್ ಸುಧಾಕರ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಸೆ.17 ರಂದು ನಡೆಯಿತು.
ಸಂಘದಲ್ಲಿ 2968ಸದಸ್ಯರನ್ನು ಹೊಂದಿದ್ದು ಒಟ್ಟು ರೂ. 2,35,70,550 ಪಾಲು ಬಂಡವಾಳ ಹೊಂದಿರುತ್ತದೆ. ಈ ಸಾಲಿನಲ್ಲಿ ಒಟ್ಟು ರೂ. 21.62ಕೋಟಿ ಠೇವಣಿ ಸಂಗ್ರಹಗೊಂಡು ರೂ 198.74 ರಷ್ಟು ವಾರ್ಷಿಕ ವ್ಯವಹಾರ ನಡೆಸಿ 66.69 ನಿವ್ವಳ ಲಾಭ ಗಳಿಸಿದೆ. 100% ಸಾಲ ವಸೂಲಾತಿಯಾಗಿದ್ದು.
ಲೆಕ್ಕ ಪರಿಶೋಧನೆಯಲ್ಲಿ ಎ ಗ್ರೇಡ್ ಪಡೆದಿದೆ ಎಂದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಗೌಡ ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್ ಶಶಿಕಾಂತ್ ಜೈನ್, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ನಿರ್ದೇಶಕರಾದ ಎನ್. ಜೀವಂದರ್ ಕುಮಾರ್, ವಿಠಲ ಪೂಜಾರಿ, ರಾಜೇಂದ್ರ ಕುಮಾರ್, ಜಗದೀಶ್ ಹೆಗ್ಡೆ, ಲಕ್ಷ್ಮಣ ಪೂಜಾರಿ, ಲಿಂಗಪ್ಪ ಮಲೆಕುಡಿಯ, ಹರೀಶ್ ಹೆಗ್ಡೆ, ಶ್ರೀ ಪೆರ್ನ ಶ್ರೀಮತಿ ಯಶೋಧ, ಶ್ರೀಮತಿ ಸುಜಲತಾ ಉಪಸ್ಥಿತರಿದ್ದರು.ಸಿಬಂದಿಗಳಾದ ಶ್ರೀಮತಿ ವನಿತಾ, ಶೇಖರ ಕೆ., ಶ್ರೀಮತಿ ಮಲ್ಲಿಕಾ, ಶ್ರೇಯಾಂಸ ಕುಮಾರ್, ಅಶೋಕ್ ಸಹಕರಿಸಿದರು.
ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ನಿರಂಜನ್ ಅಜ್ರಿ, ನಾರಾವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಿತ್ರ ಸಂಘದ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು, ಸದಸ್ಯರುಗಳು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಣಾಧಿಕಾರಿ ಎನ್. ಶಶಿಕಾಂತ್ ಜೈನ್ ವರದಿ ಮಂಡಿಸಿದರು. ಲಾಭಾಂಶದ ವಿವರ ಲೆಕ್ಕಿಗರಾದ ವನಿತಾ ನೀಡಿದರು. ಉಪಾಧ್ಯಕ್ಷ ಸದಾನಂದ ಗೌಡ ಸ್ವಾಗತಿಸಿದರು.