Site icon Suddi Belthangady

ಅರಸಿನಮಕ್ಕಿ ಹಾಲು ಉತ್ಪಾದಕರ ಸಹಕಾರಿ ಸಂಘದ 2022-23 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ

ಅರಸಿನಮಕ್ಕಿ:ಅರಸಿನಮಕ್ಕಿ ಹಾಲು ಉತ್ಪಾದಕರ ಸಹಕಾರಿ ಸಂಘದ 2022-23 ನೆ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಿ ಎ ಬ್ಯಾಂಕ್ ಬಿಲ್ಡಿಂಗಿನ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವರದಶಂಕರ ದಾಮ್ಲೆ ವಹಿಸಿದ್ದರು.

ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿಯಾದ ಶ್ರೀ ಹರೀಶ್ ಪಿ ಅಭ್ಯಂಕರ್ ಮಂಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಡಾ. ಜಿತೇಂದ್ರ ಪ್ರಸಾದ್ ಹೈನುಗಾರಿಕೆಗೆ ಸಂಬಂಧಪಟ್ಟಂತೆ ಹಸು ಸಾಕಾಣಿಕೆ,ಹಸುವಿನ ವಿಮೆ ಹಸುಗಳಿಗೆ ಇತ್ತೀಚೆಗೆ ವ್ಯಾಪಕವಾಗಿ ಹರಡಿದ ಚರ್ಮಗಂಟು ಕಾಯಿಲೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಹಾಲು ಉತ್ಪಾದನೆ ಗಣನೀಯವಾಗಿ ಕುಸಿದಿದ್ದು ಉತ್ಪಾದನೆ ಹೆಚ್ಚಿಸಲು ಸದಸ್ಯರಲ್ಲಿ ಮನವಿ ಮಾಡಿದರು.ಸಂಘದ ವಾರ್ಷಿಕ ನಿವ್ವಳ ಲಾಭ 2.9ಲಕ್ಷ ಇದ್ದು ಇದರಲ್ಲಿ ಸದಸ್ಯರಿಗೆ 10% ಡಿವಿಡೆಂಟ್ ಹಾಗೂ ಹಾಲು ಉತ್ಪಾದಕರಿಗೆ 65% ಬೋನಸ್ ನೀಡುವುದಾಗಿ ಸಂಘದ ಅಧ್ಯಕ್ಷರಾದ ವರದಶಂಕರ ದಾಮ್ಲೆ ತಿಳಿಸಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ವರದಶಂಕರ ದಾಮ್ಲೆ, ಉಪಾಧ್ಯಕ್ಷರಾದ ಸೀತಾ .ಎ, ನಿರ್ದೇಶಕರುಗಳಾದ ಶಿವಾನಂದ ಮಯ್ಯ, ಸಂಜೀವ ಶೆಟ್ಟಿಗಾರ್, ಪ್ರವೀಣ್ ಟಿ, ಯೋಹನ್ನನ್ ಎ. ಡಿ, ಕೃಷ್ಣಪ್ಪ ಕುಲಾಲ್, ಜನಾರ್ಧನ ಪೂಜಾರಿ .ಬಿ, ಕೃಷ್ಣಪ್ಪ ಪೂಜಾರಿ, ವಿಮಲಾಕ್ಷಿ, ಸುಂದರಿ, ನೀಲಮ್ಮ, ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಶ್ರೀಮತಿ ಹೇಮಾವತಿ ಸ್ವಾಗತವನ್ನು ನಿರ್ದೇಶಕರಾದ ಕೃಷ್ಣಪ್ಪ ಕುಲಾಲ್ ಹಾಗೂ ವಂದನಾರ್ಪಣೆಯನ್ನು ಸಂಘದ ಕಾರ್ಯದರ್ಶಿಯಾದ ಹರೀಶ್ .ಪಿ ಅಭ್ಯಂಕರ್ ನೆರವೇರಿಸಿದರು.

Exit mobile version