ನೆರಿಯ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಸಮೂಹ ಸಂಪನ್ಮೂಲ ಕೇಂದ್ರ ಅಣಿಯೂರು ಕಕ್ಕಿಂಜೆ ಇದರ ಸಹಭಾಗಿತ್ವದಲ್ಲಿ ಅಣಿಯೂರು ಕಕ್ಕಿಂಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಬಯಲು ಶಾಲೆಯಲ್ಲಿ ನಡೆಯಿತು.
ನೆರಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಜಿತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳಿಗೆ ಶುಭಾ ಹಾರೈಸಿದರು.
ಮುಖ್ಯ ಅತಿಥಿ ಸ್ಧಾನದಲ್ಲಿ ಮಾತನಾಡಿದ ನೆರಿಯ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ ರಾಮ್ ಕುಮಾರ್ ವಿದ್ಯಾರ್ಥಿಗಳ ಪ್ರತಿಭಾಯನ್ನು ಹೊರ ಹಾಕಲು ಉತ್ತಮ ವೇದಿಕೆ, ಪ್ರತಿಭಾ ಕಾರಂಜಿ ಕಾರ್ಯಕ್ರಮದಿಂದ ಹಲವು ಮಂದಿ ಉತ್ತಮ ನಾಟಕ ಕಲಾವಿದರಾಗಿದ್ದಾರೆ. ಶಿಕ್ಷರಿಗೆ ಗೌರವ ನೀಡುವ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಧಾನಕ್ಕೆ ಹೋಗುತ್ತಾರೆ ಎಂದು ತಿಳಿಸಿದರು.ಸಭೆಯಲ್ಲಿ ಎಸ್.ಡಿ.ಎಮ್.ಸಿ. ಅಧ್ಯಕ್ಷ ಬಾಲಕೃಷ್ಣ ಗೌಡ ವಹಿಸಿದ್ದರು.
ಗ್ರಾಮ ಸದಸ್ಯೆ ರೀನಾ, ಕರ್ನಾಟಕ ಬ್ಯಾಂಕಿನ ಮೇನೇಜರ್ ಅವಿನಾಶ್, ಶಿಕ್ಷಣ ಇಲಾಖೆಯ ಚೇತನಾಕ್ಷಿ, ಸಿ.ಆರ್.ಪಿ.ಪ್ರಶಾಂತ್, ಶಿಕ್ಷಕರ ಸಂಘದ ಕಾರ್ಯದರ್ಶಿ ಜ್ಯೋತಿ, ಬೋವಿನಾಡಿ ಮದರಸದ ಧರ್ಮಗುರು ಅರೀಷ್, ಉಪಸ್ಧರಿದ್ದರು.ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಓಂಕಾರ್ ಯಚ್.ಎಸ್.ಸ್ವಾಗತಿಸಿ ಶಿಕ್ಷಕ ಮಂಜುನಾಥ ವಂದಿಸಿ ಶಿಕ್ಷಕಿ ಮಮತಾ ನಿರೂಪಿಸಿದರು.