ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಳದಂಗಡಿ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಿವ ಭಟ್ ಕಟ್ಟೂರು ಅವರ ಅಧ್ಯಕ್ಷತೆಯಲ್ಲಿ ಅಳದಂಗಡಿ ಸ್ವರಾಜ್ ಟವರ್ಸ್ ನ ಶ್ರೀಗುರು ಸಭಾಭವನದಲ್ಲಿ ಸೆ.16ರಂದು ನಡೆಯಿತು.
ವರದಿ ಸಾಲಿನಲ್ಲಿ ಸಂಘ ತಮ್ಮ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಪಡಿತರ ವಿತರಣೆ, ರಾಸಾಯನಿಕ ಗೊಬ್ಬರ, ಅಡುಗೆ ಅನಿಲ ಮತ್ತು ಕ್ರಿಮಿನಾಶಕಗಳನ್ನು ಮಾರಾಟ ಮಾಡಿದೆ.ರೂ 1,00,19003.12 ಖರೀದಿಸಿ ರೂ.89,72,998.89ರಷ್ಟು ಸೊತ್ತುಗಳನ್ನು ಮಾರಾಟ ಮಾಡಿದೆ.
ಇದರಿಂದ 14,83,501.13 ರಷ್ಟು ವ್ಯಾಪಾರ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶಿವ ಭಟ್ ಕಟ್ಟೂರು ತಿಳಿಸಿದರು.ಈ ಸಾಲಿನಲ್ಲಿ ಒಟ್ಡು ರೂ 3,44,88,44,298.25 ರಷ್ಟು ವಾರ್ಷಿಕ ವ್ಯವಹಾರ ನಡೆಸಿ
1ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ 12.50 ಶೇ ಡಿವಿಡೆಂಡ್ ಘೋಷಣೆ ಮಾಡಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮೀರಾ, ನಿರ್ದೇಶಕರಾದ ಹೆಚ್. ಧರ್ಣಪ್ಪ ಪೂಜಾರಿ, ಗುರುಪ್ರಸಾದ್, ಪ್ರಶಾಂತ್ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಶಶಿಧರ ಶೆಟ್ಟಿ ಎ, ಧರ್ಣಪ್ಪ, ಕೆಂಪ, ಗುಲಾಬಿ ಎಂ.ಎನ್, ಶ್ರೀಮತಿ ಸುಂದರಿ, ಜಿನ್ನಪ್ಪ ಪೂಜಾರಿ, ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಗೊಂದು ಸರಕಾರದ ಸುತ್ತ್ತೊಲೆ ಪ್ರಕಾರ ಬಳಂಜದಲ್ಲಿ ಪ್ರತ್ಯೇಕ ಸಹಕಾರಿ ಸಂಘ ಸ್ಥಾಪನೆಗೆ ಮಹಾಸಭೆ ಯಲ್ಲಿ ಬಳಂಜ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು. ಈ ಬಗ್ಗೆ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.