Site icon Suddi Belthangady

ಪಣಕಜೆ: ಹಾಲು ಉ.ಸ ಸಂಘದ ವಾರ್ಷಿಕ ಸಾಮಾನ್ಯ ಸಭೆ- ಸದಸ್ಯರಿಗೆ 65% ಬೋನಸ್ ಮತ್ತು ಡಿವಿಡೆಂಡ್ 10% ಘೋಷಣೆ

ಪಣಕಜೆ: ಪಣಕಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ಸಪ್ಟೆಂಬರ್ 15ರಂದು ಸಂಘದ ಅಧ್ಯಕ್ಷರಾದ ಶ್ರೀಯುತ ಪದ್ಮನಾಭ ಶೆಟ್ಟಿ ಅರ್ಕಜೆಯವರ ಅಧ್ಯಕ್ಷತೆಯಲ್ಲಿ ಸಭೆಯು ನಡೆಯಿತು.ಉಪಾಧ್ಯಕ್ಷ ಸಿರಿಲ್ ಸೀಕ್ವೆರಾರವರು ಎಲ್ಲರನ್ನು ಸ್ವಾಗತಿಸಿದರು.ಪ್ರಭಾರ ಕಾರ್ಯದರ್ಶಿಯಾದ ರೋಹಿತ್ ರವರು ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು. ದಕ್ಷಿಣ ಕನ್ನಡ ಹಾಲು ಒಕ್ಕೂಟ ವಿಸ್ತರಣಾಧಿಕಾರಿಯಾದ ಸುಚಿತ್ರದವರು ದಕ್ಷಿಣ ಕನ್ನಡ ಹಾಲು ಒಕ್ಕೂಟ ಯೋಜನೆಗಳ ಬಗ್ಗೆ ತಿಳಿಕೊಟ್ಟರು ಮತ್ತು ಲೆಕ್ಕಪರಿಶೋಧನ ವರದಿಯನ್ನು ಮಂಡಿಸಿದರು.ಪಶು ವೈದ್ಯಾಧಿಕಾರಿ ಡಾಕ್ಟರ್ ಪೂಜಾರವರು ಪಶುಗಳ ಪೋಷಣೆ ಕರುಸಾಕಾಣಿಕೆ ಯೋಜನೆ ಮತ್ತು ರಾಸು ವಿಮೆಗಳ ಬಗ್ಗೆ ಪಶುಗಳಿಗೆ ಔಷಧಿ ಬಳಸುವ ಬಗ್ಗೆ ಮಾಹಿತಿ ನೀಡಿದರು.

ನಿರ್ದೇಶಕ ಚಂದ್ರಶೇಖರ ಬಿ.ಶೆಟ್ಟಿ , ಹರೀಶ್ ಪೂಜಾರಿ, ಗಣೇಶ್ ಪ್ರಭು, ಚಂದ್ರಶೇಖರ ಶೆಟ್ಟಿ, ಸೇಸಪ್ಪ ಪೂಜಾರಿ, ರಮೇಶ್ ಆಚಾರ್ಯ, ಲೂಸಿ ಡಿಸೋಜ, ಮೈಕಲ್ ಡಿಸೋಜ, ಪ್ರೇಮಲತಾ ಮತ್ತು ಗಿರಿಜರವರು ಉಪಸ್ಥಿತರಿದ್ದರು.ಸಂಘದ ಸಿಬ್ಬಂದಿ ಹರೀಶ್ ಪ್ರಭು ಮೋಹನ್ ಪ್ರಭು ಮತ್ತು ಸೀತಾರಾಮ ಪೂಜಾರಿಯವರು ಸಹಕರಿಸಿದರು ಹಾಗೂ ಶ್ರೀ ಕೃಷ್ಣ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿಯವರು ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ಪಡಂಗಡಿ ಉಪಕೇಂದ್ರ ಸೋಣಂದೂರು ಇದರ ಸಮನ್ವಯ ದೊಂದಿಗೆ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಸಂಘದ ಸದಸ್ಯರಾದ ಜನಾರ್ಧನ ಮೂಲ್ಯ, ಶ್ರೀ ದಿನೇಶ್ ಪ್ರಭು ಮತ್ತು ಶ್ರೀ ಕೇಶವ ಪೂಜಾರಿಯವರನ್ನು ಸನ್ಮಾನಿಸಲಾಯಿತು ಮತ್ತು ದಕ್ಷಿಣ ಕನ್ನಡ ಒಕ್ಕೂಟದ ನಿವೃತ್ತ ವ್ಯವಸ್ಥಾಪಕರಾದ ಡಾಕ್ಟರ್ ನಿತ್ಯಾನಂದರವರಿಗೆ ಸನ್ಮಾನವನ್ನು ನೆರವೇರಿಸಲಾಯಿತು ಹಾಗೂ ಉತ್ಪಾದಕ ಸದಸ್ಯರಿಗೆ 65% ಬೋನಸ್ ಮತ್ತು ಡಿವಿಡೆಂಡ್ 10% ಘೋಷಿಸಲಾಯಿತು ಮತ್ತು ನಿರ್ದೇಶಕರಾದ ಹರೀಶ್ ಪೂಜಾರಿ ಅವರು ಧನ್ಯವಾದವನ್ನು ಸಲ್ಲಿಸಿದರು.

Exit mobile version