ಬೆಳ್ತಂಗಡಿ: ರಾಷ್ಟ್ರ ಭಾಷೆಯೆಂದು ಗುರುತಿಸಿಕೊಂಡಿರುವ ಹಿಂದಿ ಭಾಷೆಯಿಂದ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯವಿದೆ.ಹಿಂದಿ ಭಾಷೆ ರಾಷ್ಟ್ರ ಭಾಷೆಯಾದರೂ ನಮ್ಮ ದೇಶದಲ್ಲಿ ಹಿಂದಿ ಭಾಷೆ ಕೇವಲ ಕೆಲವು ರಾಜ್ಯಗಳ ರಾಜ್ಯ ಭಾಷೆ ಮಾತ್ರ ಆಗಿರುತ್ತದೆ ಆದರೂ ಕೂಡ ದೇಶದ ಐಕ್ಯತೆಯ ದೃಷ್ಟಿಯಿಂದ ನಾವು ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಒಪ್ಪಿಕೊಂಡಿದ್ದೇವೆ ಎಂದು ವಾಣಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಶಿಕ್ಷಕಿ ಪ್ರೀತಿ ಹೇಳಿದರು.
ವಾಣಿ ಕಾಲೇಜಿನಲ್ಲಿ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಹಿಂದಿ ಭಾಷೆಯ ಹಿನ್ನೆಲೆ ಹಾಗೂ ಭಾಷೆಯನ್ನು ಉಳಿಸಿ ಬೆಳೆಸುವ ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು, ಹಿಂದಿ ಉಪನ್ಯಾಸಕಿ ರಮ್ಯಾ ಜೋಶಿ ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ರೂಪಶ್ರೀ ವಂದಿಸಿದರು ವಿದ್ಯಾರ್ಥಿ ಆದಿತ್ಯ ಕಾರ್ಯಕ್ರಮ ನಿರೂಪಿಸಿದರು.