ಪಡ್ದಂದಡ್ಕ: ಬಜಿರೆ ಕ್ರೀಡಾ ವಲಯದ ಪ್ರಾಥಮಿಕ ಶಾಲಾ ವಿಭಾಗ ಮಟ್ಟದ ಬಾಲಕ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟ ಸೆ.15ರಂದು ಪೆರಿಂಜೆಯಲ್ಲಿ ಜರಗಿತು.ಬಾಲಕರ ವಿಭಾಗದದಲ್ಲಿ ನವಚೇತನಾ ಪ್ರಾಥಮಿಕ ಶಾಲೆ ವೇಣೂರು ಪ್ರಥಮ, ದ ಕ ಜಿಲ್ಲಾ ಪಂ.ಪ್ರಾಥಮಿಕ ಶಾಲೆ ಕಾಶಿಪಟ್ಣ ದ್ವಿತೀಯ ಸ್ಥಾನ ಪಡೆದು ಕೊಂಡಿತು.ಬಾಲಕಿಯರ ವಿಭಾಗದಲ್ಲಿ ದ.ಕ.ಜಿ.ಪಂ.ಪ್ರಾಥಮಿಕ ಶಾಲೆ ಕಾಶಿಪಟ್ಣ ಪ್ರಥಮ
ದ.ಕ.ಜಿ.ಪಂ.ಪ್ರಾಥಮಿಕ ಶಾಲೆ ಪಡ್ದಂದಡ್ಕ ದ್ವಿತೀಯ ಸ್ಥಾನ ಪಡೆಯಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತವಾರಿ ಸಮಿತಿ, ದ.ಕ . ಜಿಲ್ಲಾ ಪಂಚಾಯತ್ ಶಾಲೆ ಪಡ್ಡಂದಡ್ಕ ಇವರ ಆಶ್ರಯದಲ್ಲಿ ಬಜಿರೆ ಕ್ರೀಡಾ ವಲಯದ ಪ್ರಾಥಮಿಕ ಶಾಲಾ ವಿಭಾಗ ಮಟ್ಟದ ಬಾಲಕರು ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟವನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಪಂದ್ಯಾಟವನ್ನು ಉದ್ಘಾಟಿಸಿ ಮಾತಾಡಿ,”ಒಂದು ತಂಡ ಗೆದ್ದರೆ ಇನ್ನೊಂದು ತಂಡ ಸೋಲಲೇ ಬೇಕು.ಸೋಲು ಮುಂದಿನ ಗೆಲುವಿಗೆ ನಾಂದಿಯಾಗುತ್ತೆ, ಭಾಗವಹಿಸುವುದು ಮುಖ್ಯ ಎಂದರು.
ಮುಖ್ಯ ಅಥಿತಿಗಳಾಗಿ ಸ್ಥಳೀಯ ನೂರುಲ್ ಹುಧಾ ಜುಮ್ಮಾ ಮಸೀದಿ ಪಡ್ದಂದಡ್ಕ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಪಡ್ದಂದಡ್ಕ, ನಿಟ್ಟಡೆ ಸಮೂಹ ಸಂಪನ್ಮೂಲ ವ್ಯಕ್ತಿ ಆರತಿ, ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ ರಾಜೇಶ್, ವಲಯಮಟ್ಟದ ನೋಡಲ್ ಅಧಿಕಾರಿ ವಿಧ್ಯಾವತಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಪಡ್ಡಂದಡ್ಕ ಶಬ್ಬೀರ್ ಪಿ.ಎಸ್., ನಿವೃತ್ತ ದೈಹಿಕ ಶಿಕ್ಷಕ ರತ್ನಾಕರ್ ಶೇರಿಗಾರ, ಪಡ್ಡಂದಡ್ಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಮಲಮ್ಮ , ಜಗದೀಶ್ ಎಚ್. ವಿವಿಧ ಶಾಲಾ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು,ಊರ ನಾಗರಿಕರು ಉಪಸ್ಥಿತರಿದ್ದರು.