ಮಲೆಬೆಟ್ಟು: ಕೊಯ್ಯೂರ್ ಗ್ರಾಮದ ಮಲೆಬೆಟ್ಟುವಿನ ಎಂ.ಬಿ ಸಂಕೀರ್ಣದಲ್ಲಿ ನೂತನವಾಗಿ ಗ್ರಾಮ ಒನ್ ಸೇವಾ ಕೇಂದ್ರ ಸೆ.14ರಂದು ಉದ್ಘಾಟನೆಗೊಂಡಿತು.
ಗ್ರಾಮ ಪಂಚಾಯತ್ ಕೊಯ್ಯೂರು ಇದರ ಅಧ್ಯಕ್ಷ ದಯಾಮಣಿ ಇವರು ಉದ್ಘಾಟನೆ ನೆರವೇರಿಸಿ ಶುಭಹಾರೈಸಿದರು.ವಿಶೇಷ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ನೂತನ ಮಳಿಗೆಗೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಾಗೇಶ್ ಕುಮಾರ್ ಅಧ್ಯಕ್ಷರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಗ್ರಾಮೀಣ, ನವೀನ ಕುಮಾರ್ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಯ್ಯೂರು, ಹರೀಶ್ -ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಕೊಯ್ಯೂರು, ತಾ.ಪಂ.ಮಾಜಿ ಸದಸ್ಯ ಪ್ರವೀಣ್ ಕುಮಾರ್, ಕೊಯ್ಯೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಜಗನಾಥ್, ಮಲೆಬೆಟ್ಟು ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಮಟ್ಲ, ಕೊಯ್ಯೂರು ಗ್ರಾ.ಪಂ ಸದಸ್ಯರಾದ ಲೋಕೇಶ್ ಗೌಡ, ಇಸುಬು, ವಿಶಾಲಾಕ್ಷಿ, ಹೇಮಾವತಿ, ಗಿರೀಶ್, ದಿವ್ಯ, ಧರ್ಮಣ್ಣ ಗೌಡ ಮಾಲಕರು ಕಾರ್ತಿಕ್ ಎಂಟರ್ ಪ್ರೈಸಸ್ ಉಜಿರೆ, ಪ್ರಮುಖರಾದ ಶಿವಪ್ಪ ಗೌಡ, ಮುಖ್ಯ ಶಿಕ್ಷಕರಾದ ರಂಗಸ್ವಾಮಿ, ಕಟ್ಟಡ ಮಾಲಕರಾದ ಬಾವಙ್ಙ, ಸಾಧಿಕ್ ಮಾಸ್ಟ್ರು ಮಲೆಬೆಟ್ಟು, ಡಿ ಹೆಚ್ ಇಬ್ರಾಹಿಂ, ಗಂಗಯ್ಯ ಗೌಡ, ಅಬ್ದುಲ್ಲ, ಭಾಸ್ಕರ ಆಚಾರ್ಯ, ಹೈದರ್ ಕಜೆ, ಡಿಹೆಚ್ ಸಾಧಿಕ್, ಸಂಶುದ್ದೀನ್, ನಾರಾಯಣ ನೀರಕಜೆ, ಅಕ್ಬರ್ ಅಂಗಡಿ, ಆದಂ, ದನಂಜಯ ರಾವ್ ಬೆಳ್ತಂಗಡಿ, ಸುಧೀರ್ ದೇವಾಡಿಗ ಬೆಳ್ತಂಗಡಿ, ಯೋಗೀಶ್ ದುರ್ಗಾ ಲಾಂಡ್ರಿ ಬೆಳ್ತಂಗಡಿ, ಸುರೇಶ್ ಸುವರ್ಣ ಮಾಪಲಾಡಿ, ನವೀನ್ ಗೌಡ ಸವಣಾಲು, ರಕ್ಷಿತ್ ಅಳದಂಗಡಿ ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲರನ್ನೂ ಮಾಲಕರಾದ ಮೊಹಮ್ಮದ್ ಸಿದ್ದಿಕ್ ಮಲೆಬೆಟ್ಟು ಹಾಗೂ ಪರ್ಝಾನ ದಂಪತಿಗಳು ಸ್ವಾಗತಿಸಿದರು.ಗುರುರಾಜ್ ಗುರಿಪಳ್ಳ ಕಾರ್ಯಕ್ರಮ ನಿರೂಪಿಸಿದರು.