ಬೆಳ್ತಂಗಡಿ: ಹೋಲಿ ರಿಡೀಮರ್ ಶಾಲಾ ಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿ ಮಕ್ಕಳಿಗೆ ಬಣ್ಣಗಳನ್ನು ಪರಿಚಯಿಸಲು ಮತ್ತು ಮಕ್ಕಳನ್ನು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸುವ ಉದ್ದೇಶದಿಂದ ಸೆಪ್ಟೆಂಬರ್ 13ರಂದು ‘ರೆಡ್ ಡೇ ‘ ದಿನವಾಗಿ ಆಚರಿಸಲಾಯಿತು.
ಪುಟಾಣಿ ಮಕ್ಕಳು ಕೆಂಪು ಬಣ್ಣದ ಬಟ್ಟೆ, ಆಭರಣಗಳನ್ನು ತೊಟ್ಟು ಆಕರ್ಷಕವಾಗಿ ಕೆಂಪು ಗುಲಾಬಿಗಳಂತೆ ಮಿನುಗುತ್ತಿದ್ದರು.ಹಾಗೆಯೇ ಕೆಂಪು ಬಣ್ಣದ ಆಟಿಕೆಗಳು, ಹೂಗಳು, ತರಕಾರಿಗಳು, ಹಣ್ಣುಗಳನ್ನು ಗುರುತಿಸಿ, ಜೋಡಿಸಿ ಸಂತಸಪಟ್ಟರು. ವಿದ್ಯಾರ್ಥಿಗಳಿಗೆ ಅಭಿನಯಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಕೆಂಪು ಬಣ್ಣದ ವಿಶೇಷತೆಯನ್ನು ತಿಳಿಸಿ ಶುಭ ಹಾರೈಸಿದರು.ಸಹಶಿಕ್ಷಕಿಯರಾದ ಶಾಂತಿ ಪಿರೇರಾ, ಅಖೀದಾ ಬಾನು ಹಾಗೂ ಸಂಧ್ಯಾ ಸಹಕರಿಸಿದರು.