Site icon Suddi Belthangady

ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಜೇಸಿ ಸಪ್ತಾಹದ ಅಂಗವಾಗಿ ಶಾಲೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ಕೊಕ್ಕಡ: ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಜೇಸಿ ಸಪ್ತಾಹದ ಅಂಗವಾಗಿ ಶಾಲೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಸೆ.14 ರಂದು ವೈಯಕ್ತಿಕ ಸ್ವಚ್ಛತೆ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಹತ್ಯಡ್ಕ. ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಇರುವ ಶಾಲೆತ್ತಡ್ಕ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇಖಾ ಅವರು ಮಕ್ಕಳಿಗೆ ಹಲ್ಲು ಬಾಯಿ ಹಾಗೂ ವೈಯಕ್ತಿಕ ಸ್ವಚ್ಛತೆ ಕುರಿತು ತರಬೇತಿ ನೀಡಿದರು.

ತರಬೇತಿ ವಿಭಾಗದ ಉಪಾಧ್ಯಕ್ಷರಾದ ವಿದ್ಯೇಂದ್ರ ಅವರು ಅಧ್ಯಕ್ಷತೆ ವಹಿಸಿದ್ದರು.ಅಕ್ಷತ್ ರೈ ಜೇಸಿ ವಾಣಿ ವಾಚಿಸಿದರು.ನಿಕಟಪೂರ್ವ ಅಧ್ಯಕ್ಷರಾದ ಕೆ.ಶ್ರೀಧರ ರಾವ್ ಅವರು ಅತಿಥಿಗಳನ್ನು ಪರಿಚಯಿಸಿದರು.

ಎಲ್ಲಾ ಮಕ್ಕಳಿಗೂ ಹಲ್ಲು ಉಜ್ಜುವ ಬ್ರಷ್, ಪೇಸ್ಟ್ ವಿತರಿಸಲಾಯಿತು.ಅತಿಥಿ ಹಾಗೂ ಕೇಂದ್ರಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ನಿಖಿತಾ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸುಜಾತ, ಜೋಸೆಫ್ ಪಿರೇರಾ, ಸೌಜನ್ಯ, ಯಶೋಧ, ಭಾರತಿ, ದೇವಪ್ಪ ಪೂಜಾರಿ, ಜಯಚಂದ್ರ ಬಲ್ಕಜೆ, ಪಿ.ಟಿ. ಸೆಬಾಸ್ಟಿಯನ್, ಪೋಷಕರು ಮುಂತಾದ ಗಣ್ಯರು ಉಪಸ್ಥಿತರಿದ್ದರು.ಅಂಗನವಾಡಿ ಕೇಂದ್ರದ ಸಹಾಯಕಿ ಶ್ರೀಮತಿ ವಿಜಯಾ ವಂದಿಸಿದರು.

Exit mobile version