Site icon Suddi Belthangady

ಓಡಿಲ್ನಾಳ ಸ.ಉ.ಪ್ರಾ.ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

ಬೆಳ್ತಂಗಡಿ: ಸ.ಉ.ಪ್ರಾ.ಶಾಲೆ ಓಡಿಲ್ನಾಳ ಇಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಅರಣ್ಯ ಪರಸರ ಜೀವಿಶಾಸ್ತ್ರ ಇಲಾಖೆ ಹಾಗೂ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತ ಅಶ್ರಯದಲ್ಲಿ ಸಸ್ಯ ಶ್ಯಾಮಲ ಜಿಲ್ಲಾ ಮಟ್ಟದ ಕಾರ್ಯಕ್ರಮದಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ಸೆ.11 ರಂದು ನಡೆಸಲಾಯಿತು.ಡಿಡಿಪಿಐ ದಯಾನಂದ ರಾಮಚಂದ್ರ ನಾಯ್ಕ್ ಇವರ ಮುಂದಾಳತ್ವದಲ್ಲಿ, ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಇವರು ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಆರ್ ಎಫ್ ಕುಮಾರಿ ವಿದ್ಯಾ, ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಶೆಟ್ಟಿ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷಪ್ಪ, ಕುವೆಟ್ಟು ಗ್ರಾ.ಪಂ ಸದಸ್ಯರಾದ ಲಕ್ಷ್ಮಿಕಾಂತ್ ಶೆಟ್ಟಿ ಮೂಡೈಲು, ಆನಂದಿ ಮದ್ದಡ್ಕ, ಶಿಕ್ಷಣ ಸಂಯೋಜಕರಾದ ಸಿದ್ದಲಿಂಗಸ್ವಾಮಿ, ಗುರುವಾಯನಕೆರೆ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ರಾಜೇಶ್, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು, ಉಪಾಧ್ಯಕ್ಷೆ ಶಮೀಮ, ಸದಸ್ಯರಾದ ಶೀಲಾ, ಪ್ರಮೀಳಾ, ಜಾಸ್ಮಿನ್, ಚಿತ್ರ, ದೂಜ ಕೆ, ಸುರೇಶ್ ಆಚಾರಿ, ರಫೀಕ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರುಣ್, ಸುಮಿತ್ ಡಿಸೋಜ ನಾನಾಡಿ, ಶಾಲಾ ಮುಖ್ಯೋಪಾಧ್ಯಾಯನಿ ಉಷಾ ಪಿ, ಶಾಲಾ ಅಭಿಮಾನಿಗಳಾದ ನಾರಾಯಣ ಭಟ್ ನಡುಮನೆ, ಪೂವಪ್ಪ ಭಂಡಾರಿ ಪಣೆಜಾಲು. ಪೋಷಕ ವೃಂದ, ಸಹ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು , ಅಡುಗೆ ಸಿಬಂದಿಗಳು ಉಪಸ್ಥಿತರಿದ್ದರು.

ಡಿಡಿಪಿಐ., ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಸಿ.ಆರ್.ಪಿ ಬಿಸಿಊಟದ ರುಚಿಯ ಸವಿದು ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Exit mobile version