Site icon Suddi Belthangady

ಉಜಿರೆ ಶ್ರೀ ಧ.ಮ.ಸೆಕಂಡರಿ ಪ್ರೌಢ ಶಾಲೆಯಲ್ಲಿ ಸಂಸ್ಕೃತೋತ್ಸವ

ಉಜಿರೆ: ಸಂಸ್ಕೃತವು ಭಾರತೀಯತೆ ಹಾಗೂ ಇಲ್ಲಿನ ಸಂಸ್ಕೃತಿಯ ಪ್ರತೀಕವಾಗಿದ್ದು, ಅತ್ಯಂತ ಪ್ರಾಚೀನ ಮಾತ್ರವಲ್ಲದೆ ಸರಳವಾದ ಭಾಷೆಯೂ ಆಗಿದೆ ಎಂದು ಸಂಸ್ಕೃತ ಭಾಷಾ ತರಬೇತುದಾರರಾದ ಶ್ರೀಮತಿ ಸುಧಾ ಶ್ರೀ ಹೇಳಿದರು.

ಅವರು ಸೆ.12 ರಂದು ಉಜಿರೆಯ ಎಸ್ ಡಿ ಎಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಸಂಸ್ಕೃತ ಭಾಷೆ ಹಾಗೂ ಸಾಹಿತ್ಯದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ಸಂಸ್ಕೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಸುರೇಶ್.ಕೆ ಶುಭ ಹಾರೈಸಿದರು.ಹಿರಿಯ ಶಿಕ್ಷಕಿ ಜಯಶ್ರೀ ಹಾಗೂ ಕಾರ್ಯಕ್ರಮದ ಸಂಯೋಜಕಿ ಸಂಸ್ಕೃತ ಭಾಷೆಯ ಶಿಕ್ಷಕಿ ಭಾಗ್ಯಲಕ್ಷ್ಮಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಕೃತ ವಿದ್ಯಾರ್ಥಿಗಳು ಪ್ರದರ್ಶಿಸಿದರು.ವಿದ್ಯಾರ್ಥಿ ಪ್ರಥಮ್ ಸ್ವಾಗತಿಸಿ ನಿಖಿಲ್ ವಂದಿಸಿದರು.ಕುಮಾರಿ ನಿಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು.ಕುಮಾರಿ ವಸುಧಾ ಕಾರ್ಯಕ್ರಮ ನಿರೂಪಿಸಿದರು.ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Exit mobile version