ಬೆಳ್ತಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಬೆಳ್ತಂಗಡಿ ಶ್ರೀ ನಾರಾಯಣಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಕಲ್ಯಾಣ ಮಂಟಪ ಬೆಳ್ತಂಗಡಿಯಲ್ಲಿ ಸೆ. 13 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ವಹಿಸಿ ಮಾತನಾಡಿ ಸಂಘವು ಒಟ್ಟು 12087ಸದಸ್ಯರನ್ನು ಹೊಂದಿದ್ದು ರೂ.2ಕೋಟಿಗೂ ಮಿಕ್ಕಿ ಪಾಲು ಬಂಡವಾಳ ದೊಂದಿಗೆ ರೂ.2ಕೋಟಿ 88ಲಕ್ಷ ನಿಧಿಯೊಂದಿಗೆ 24 ಕೋಟಿ 79ಲಕ್ಷ 70ಸಾವಿರ ಠೇವಣಿ ಸಂಗ್ರಹವಾಗಿ ರೂ.143.55ಕೋಟಿ ವ್ಯವಹಾರ ನಡೆಸಿ ರೂ.54.80ಲಕ್ಷ ನಿವ್ವಳ ಲಾಭ ಗಳಿಸಿ ಶೇ.12% ಡಿವಿಡೆಂಟ್ ಘೋಷಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಗಣೇಶ್ ಭಂಡಾರಿ, ನಿರ್ದೇಶಕರಾದ ಬಿ.ಮುನಿರಾಜ ಅಜ್ರಿ, ಪುರಂದರ, ರಾಧಾ, ನಾರಾಯಣ ಆಚಾರ್ಯ, ಅಶೋಕ್ ರೈ, ಶ್ರೀನಾಥ್ ಕೆ. ಎಂ. ತಿಮ್ಮಯ್ಯ ನಾಯ್ಕ, ರಮೇಶ್ ನಲ್ಕೆ, ಹರಿಯಪ್ಪ ನಾಯ್ಕ್, ಪ್ರೇಮಾ ಎಂ,. ವಲಯ ಮೇಲ್ವಿಚಾರಕ ಸಂದೇಶ್ ಕುಮಾರ್ ಉಪಸ್ಥಿತರಿದ್ದರು.
ಹಾಗೂ ಉತ್ತಮ ಅಂಕಗಳಿಸಿದ ಸ್ಥಳೀಯ ಶಾಲಾ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸಾದ್ ಎಸ್ ವಾರ್ಷಿಕ ವರದಿಯನ್ನು ಮಂಡಿಸಿದರು.ಸಂಘದ ಸಿಬ್ಬಂದಿಗಳಾದ ಹೇಮಲತಾ ಕೆ., ವನಿತಾ, ಹರಿಣಿ ಪ್ರಭು, ನಳಿನಿ, ವಿನೋದ್ ಕುಮಾರ್, ಕೆ.ಹರೀಶ್, ಪಿಗ್ಮಿ ಸಂಗ್ರಾಹಕರಾದ ಲಕ್ಷ್ಮೀಧರ, ಸುಧಾ ಎಸ್. ಪೈ, ಸುಬ್ಬಣ್ಣ ನಾಯ್ಕ, ಲಲಿತಾ ಇವರು ಸಹಕರಿಸಿದರು.
ಮಹಾಸಭೆಯಲ್ಲಿ ಪಿಗ್ಮಿ ಸಂಗ್ರಾಹಕರು, ಮತ್ತು ಹಿರಿಯ ಸದಸ್ಯರನ್ನು ಗೌರವಿಸಲಾಯಿತು.ಉಪಾಧ್ಯಕ್ಷ ಗಣೇಶ್ ಭಂಡಾರಿ ಸ್ವಾಗತಿಸಿ, ನಿರ್ದೇಶಕ ಶ್ರೀನಾಥ್ ಕೆ.ಎಂ ವಂದಿಸಿದರು.ಸಿಬ್ಬಂದಿ ವನಿತಾ ಆರ್ಯಕ್ರಮ ನಿರೂಪಿಸಿದರು.