ನಿಟ್ಟಡೆ: 2023-24 ನೇ ಸಾಲಿನ ನಿಟ್ಟಡೆ ಕ್ಲಸ್ಟರ್ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ, ಪಡಂಗಡಿಯಲ್ಲಿ ನಡೆಯಿತು.ಕುಂಭಶ್ರೀ ಶಾಲಾ-ಕಾಲೇಜು ನಿಟ್ಟಡೆ ವೇಣೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಬಹುಮಾನವನ್ನು ಪಡೆದಿರುತ್ತಾರೆ.
ಹಿರಿಯ ವಿಭಾಗದಲ್ಲಿ ಪ್ರಿಯಾ ಕೆಎಸ್ ಭಕ್ತಿ ಗೀತೆ ಮತ್ತು ಲಘು ಸಂಗೀತ ಪ್ರಥಮ, ಸಾನ್ವಿ ಚಿತ್ರಕಲೆ ಪ್ರಥಮ, ಕೆ.ಎಸ್ ಅಹಮದ್ ಶಿಮಂ ಧಾರ್ಮಿಕ ಪಠಣ ಅರೇಬಿಕ್ ಪ್ರಥಮ, ಪ್ರೀತಿ ಕೆ ಎಸ್ ಧಾರ್ಮಿಕ ಪಠಣ ಸಂಸ್ಕೃತ ಪ್ರಥಮ, ಚಿನ್ಮಯಿ ಆಶುಭಾಷಣ ಪ್ರಥಮ ಮತ್ತು ಕಥೆ ಹೇಳುವುದು ದ್ವಿತೀಯ, ಅಸ್ರಾ ಹಿಂದಿ ಕಂಠಪಾಠ ತೃತೀಯ ಕಿರಿಯ ವಿಭಾಗ ಶ್ರೇಯಸ್ ಚಿತ್ರಕಲೆ ದ್ವಿತೀಯ, ಶರಣ್ಯ ಭಕ್ತಿಗೀತೆ ದ್ವಿತೀಯ, ಆಯುಷ್ ಇಂಗ್ಲಿಷ್ ಕಂಠ ಪಾಠ ದ್ವಿತೀಯ, ಸಂಜಿತ್ ಆಶುಭಾಷಣ ದ್ವಿತೀಯ, ಸಾನ್ವಿ ಎಂ ಅಭಿನಯ ಗೀತೆ ಪ್ರಥಮ, ಲಘು ಸಂಗೀತ ತೃತೀಯ, ವಿಹಾನ್ ಎಚ್ ಕೆ ಧಾರ್ಮಿಕ ಪಠಣ ಸಂಸ್ಕೃತ ತೃತೀಯ ಸ್ಥಾನ ಪಡೆದಿರುತ್ತಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಮ್ಮ ಶಾಲೆಯು ಪ್ರಥಮ ಸ್ಥಾನ ಪಡೆದು ಸಮಗ್ರ ಚಾಂಪಿಯನ್ ಶಿಪ್ ನಮ್ಮ ಶಾಲೆಗೆ ದೊರಕಿದೆ.ಹಿ.ಪ್ರಾ.ಉಪ ಮುಖ್ಯ ಶಿಕ್ಷಕಿ ಶುಭ, ಹಿ.ಪ್ರಾ. ಶಿಕ್ಷಕಿ ವಾಣಿ, ಸಪ್ನಜ್, ಕಿ. ಪ್ರಾ. ಉಪ ಮುಖ್ಯ ಶಿಕ್ಷಕಿ ಶ್ವೇತ, ಪೂ.ಪ್ರಾ.ಸವಿತ ಡಿಸೋಜಾ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಸಹಕರಿಸಿದರು.
ಬಹುಮಾನವನ್ನು ಪಡೆದಂತಹ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕ ಗಿರೀಶ್ ಕೆಎಚ್ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶ್ವಿತ್ ಕುಲಾಲ್ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯರಾದ ಅಕ್ಷತ ಮತ್ತು ಪವಿತ್ರ ಕುಮಾರಿ ಎಸ್ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿದರು.