Site icon Suddi Belthangady

ಲಾಯಿಲ: ಜ್ಯೋತಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ವಿಭಾಗ ಪ್ರಾರಂಭ

ಲಾಯಿಲ: ಜ್ಯೋತಿ ಆಸ್ಪತ್ರೆ ಲಾಯಿಲದಲ್ಲಿ ಫಿಸಿಯೋಥೆರಪಿ ವಿಭಾಗವು ಸೆ.09ರಂದು ಪ್ರಾರಂಭಗೊಂಡಿತು.ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಹಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಫಾ.ಅಬ್ರಾಮ್ ಪ್ಯಾಥರಿಲ್, ಫಾ.ಕುರಿಯಾಕೋಸ್ ಪೆಟ್ಟುವಾಹಿ, ಆಸ್ಪತ್ರೆ ನಿರ್ದೇಶಕಿ ಸಿಸ್ಟರ್ ಮೆರಿಟ್, ಆಡಳಿತಾಧಿಕಾರಿ ಸಿಸ್ಟರ್ ಮೇರಿಲೆಟ್, ಡಾ.ಸಿಸ್ಟರ್ ಆನ್ ಗ್ರೇಸ್, ಇತರೆ ಸಿಸ್ಟರ್, ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.

ಫಿಸಿಯೋಥೆರಫಿ ವಿಭಾಗದ ಪ್ರಭಾರಿ ಸಿಸ್ಟರ್ ಆನ್ ಫ್ರಾನ್ಸಿಸ್ IFT, ಟೆನ್ಸ್, ಅಲ್ಟ್ರಾಸೌಂಡ್, ಮ್ಯಾನುಲ್ ವ್ಯಾಯಾಮ, ಸೇವೆಗಳು ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಶಿಲ್ಪಾ ನೆರವೇರಿಸಿದರು.

Exit mobile version