ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿಯನ್ನು ಸೆ.19 ರಂದು ಆಚರಿಸಲಾಗುತ್ತಿದೆ.ಆದರೆ ಸರಕಾರಿ ರಜೆಯಾಗಿ ಸೆ.18 ರಂದು ಘೋಷಿಸಲಾಗಿದೆ.ಇದನ್ನು ಬದಲಾಯಿಸಿ ಸೆ.19 ರ ಮಂಗಳವಾರದಂದೇ ರಜೆ ನೀಡುವಂತೆ ಪ್ರತಾಪಸಿಂಹ ನಾಯಕ್ ಅವರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸೆ.11ರಂದು ಮನವಿ ಸಲ್ಲಿಸಿದ್ದಾರೆ.
ಅದೇ ರೀತಿ ಅವರು ದ.ಕ.ಜಿಲ್ಲಾಧಿಕಾರಿಯವರಿಗೂ ಮನವಿ ಪತ್ರವನ್ನು ನೀಡಿದ್ದಾರೆ.