Site icon Suddi Belthangady

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರ್ ಸಂಘದ ಸಭೆ

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರ್ ಸಂಘದ ಬೆಳ್ತಂಗಡಿ ಸಭೆಯನ್ನು ಬೆಳ್ತಂಗಡಿಯ ಅಂಬೇಡ್ಕರ್ ಸಭಾಭವನದಲ್ಲಿ ಸೆ.11ರಂದು ನಡೆಸಲಾಯಿತು.

ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿಯ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯನ್, ಬಿಎಂಎಸ್ ತಾಲೂಕು ಸಂಯೋಜಕರಾದ ಶಾಂತಪ್ಪ, ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್, ಸುಳ್ಯ ರಬ್ಬರ್ ತಾಲೂಕು ಮಜ್ದೂರ್ ಸಂಘದ ಅಧ್ಯಕ್ಷ ಶಶಿಕುಮಾರ್, ಉಪಾಧ್ಯಕ್ಷರಾದ ರಾಮರ್ ಗೂನಡ್ಕ ಹಾಗೂ ಜಿಲ್ಲಾ ಸದಸ್ಯರಾದ ರಾಜ ವಿ, ರಘುಪತಿ, ನಾಗೇಶ್ ನೆರಿಯ ಮತ್ತು ಸುಳ್ಯ, ಪುತ್ತೂರು, ಕಡಬ ತಾಲೂಕಿನ ಸದಸ್ಯರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು.ನಾಗೇಶ್ ನೆರಿಯ ಎಲ್ಲರನ್ನು ಸ್ವಾಗತಿಸಿದರು.

ರಬ್ಬರ್ ಯೂನಿಯನಿಗೆ ಸಂಬಂಧಪಟ್ಟ ವಿಷಯಗಳನ್ನು ಮತ್ತು ಸರಕಾರದಿಂದ ಸವಲತ್ತುಗಳು ಸಿಗುವ ಬಗ್ಗೆ ಇನ್ನು ಮುಂದಕ್ಕೆ ಯಾವುದೆಲ್ಲ ಪ್ರಕ್ರಿಯೆಗಳು ಮಾಡಬಹುದೆಂದು ಸೇರಿದ್ದ ರಬ್ಬರ್ ಟ್ಯಾಪರ್ ಕಾರ್ಮಿಕರಿಗೆ ಜಯರಾಜ್ ಸಾಲಿಯಾನ್ ವಿವರಿಸಿದರು.

ಬೆಳ್ತಂಗಡಿ ತಾಲೂಕು ಸಮಿತಿ ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ಹರೀಶ್ ಜೆ.ಕೆ, ಉಪಾಧ್ಯಕ್ಷರು ವಿಠ್ಠಲ್ ಪುದುವೆಟ್ಟು ಮತ್ತು ಅರುಣ್ ವರ್ಧನ್, ಪ್ರಧಾನ ಕಾರ್ಯದರ್ಶಿ ಹರೀಶ್ ಕೊಕ್ರಾಡಿ, ಜೊತೆ ಕಾರ್ಯದರ್ಶಿ ಹರಿಶ್ಚಂದ್ರ ಮತ್ತು ಅಯ್ಯಪ್ಪ, ಕೋಶಾಧಿಕಾರಿಸುರೇಂದ್ರ ನಾವೂರ, ಪ್ರಧಾನ ಸದಸ್ಯರು ಬಾಲಕೃಷ್ಣ ಸುಲ್ಕೇರಿ, ರಾಜೇಶ್ ನೆರಿಯ, ಕುಶಾಲಪ್ಪ, ಮುತ್ತು ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು ಮತ್ತು ನಾಗೇಶ್ ನೆರಿಯ ಇವರು ಎಲ್ಲರಿಗೆ ಧನ್ಯವಾದಗಳು ನೀಡಿ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

Exit mobile version