
ಗುರುವಾಯನಕೆರೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುರುವಾಯನಕೆರೆ ಇದರ ವಾರ್ಷಿಕ ಮಹಾಸಭೆಯು ಸೊಸೈಟಿಯ ಸಭಾಂಗಣದಲ್ಲಿ ಸೆ. 12 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭಗೀರಥ ಜಿ.ವಹಿಸಿದ್ದರು.ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಜಿತಾ ವಿ. ಬಂಗೇರಾ, ನಿರ್ದೇಶಕರಾದ ನಾರಾಯಣ ರಾವ್ ಎಂ, ಸಚಿನ್ ಕುಮಾರ್, ವಡಿವೇಲು, ಶಾರದಾ, ಗೋಪಿನಾಥ್ ನಾಯಕ್ ಜಿ., ಪುರಂದರ ಶೆಟ್ಟಿ, ಭುಜಂಗ ಕೆ.ಶೆಟ್ಟಿ, ಚಂದ್ರರಾಜ್, ಹರಿಶ್ಚಂದ್ರ, ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಉಪಸ್ಥಿತರಿದ್ದರು.
ಹಾಗೂ ಉತ್ತಮ ಅಂಕಗಳಿಸಿದ ಸ್ಥಳೀಯ ಶಾಲಾ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಕಲಾ ಎನ್ ವಾರ್ಷಿಕ ವರದಿಯನ್ನು ಮಂಡಿಸಿದರು.ಅಧ್ಯಕ್ಷ ಭಗೀರಥ ಜಿ ಸ್ವಾಗತಿಸಿದರು. ಸರ್ವ ಸದಸ್ಯರು ಸಹಕರಿಸಿದರು.
ಸಂಘದ ಸಿಬ್ಬಂದಿಗಳಾದ ಮಮತಾ, ಚೇತನ ಕೆ, ಭಾಗ್ಯಶ್ರೀ ಡಿ., ಮಧುರಾಜ್ ಎಸ್.ವಿ., ಅಕ್ಷತ್, ಯಶೋಧ ಸಹಕರಿಸಿದರು.