ವೇಣೂರು: ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣಾ ಸಮಿತಿ ವೇಣೂರು ವತಿಯಿಂದ ಕಾಶಿಪಟ್ಣ ಗ್ರಾಮ ಪಂಚಾಯತ್ ಗೆ 4ನೇ ಬಾರಿ ಅಧ್ಯಕ್ಷರಾಗಿ ಹಾಗೂ ಇತ್ತೀಚಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷರಾಗಿ ಆಯ್ಕೆ ಆದ ಸತೀಶ್ ಬಂಗೇರ ಕಾಶಿಪಟ್ಣ ರವರಿಗೆ ನಾಗರೀಕ ಸನ್ಮಾನ ನಡೆಯಿತು.
ಹತ್ತು ಹಲವು ಸಂಘ ಸಂಸ್ಥೆಗಳಲ್ಲ ಮುಖಂಡತ್ವ ವಹಿಸಿ ಅದರ ಅಭಿವೃದ್ಧಿಯಲ್ಲಿ ಶ್ರಮಿಸಿ ಯಶಸ್ವಿಯಾಗಿ ಇತ್ತೀಚಿಗೆ ಪೆರಾಡಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸತತವಾಗಿ ಅಧ್ಯಕ್ಷರಾಗಿ ಸಂಘದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸಾಲ ವಸೂಲಾತಿ ಮತ್ತು ಕೃಷಿಕರಿಗೆ ಸಾಲ ನೀಡುವುದರಲ್ಲಿ 100/100 ಗುರಿಯನ್ನು ಸಾಧಿಸಿ ಡಿಸಿಸಿಯಿಂದ ಬಹುಮಾನಗಳನ್ನು ಗಿಟ್ಟಿಸಿ ಅಲ್ಲದೆ ಗ್ರಾಮ ಪಂಚಾಯತ್ 4 ನೇ ಬಾರಿ ಅಧ್ಯಕರಾಗಿ ಹಾಗು ಇತ್ತೀಚಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಪಕ್ಷದ ನಗರ ಘಟಕಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಬಗ್ಗೆ ಶ್ರೀ ಕೃಷ್ಣಾ ಜನ್ಮಾಷ್ಟಮಿ ವೇಣೂರು ವತಿಯಿಂದ ಶ್ರೀ ಮಹಾಲಿಂಗೇಶ್ವರ ವಠಾರದಲ್ಲಿ ಸನ್ಮಾನಿಸಲಾಯಿತು.
ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್, ಎ.ಜಯರಾಮ ಶೆಟ್ಟಿ ಜಯಶ್ರೀ ನಿವಾಸ ಖಂಡಿಗ ವೇಣೂರು, ಸುರೇಶ್ ಮೊಯಿಲಿ, ಸತೀಶ್ ಹೆಗ್ಡೆ ಬಜಿರೆ, ನಾಗೇಶ್ ಶೆಟ್ಟಿ ವಕೀಲರು, ರಾಜೇಶ್ ಪೂಜಾರಿ ಮಾಜಿ ಗ್ರಾ.ಪಂ.ಸದಸ್ಯರು ಕೊಪ್ಪದ ಬಾಕಿಮಾರು, ತೋಮಸ್ ಆರ್ ನರೋನ್ನ, ಅಶ್ರಫ್ ಶಾಂತಿನಗರ, ಬಿ.ಎಸ್ ಮಹಮ್ಮದ್ ಅಧ್ಯಕ್ಷರು ಮೊಯಿದೀನ್ ಜುಮ್ಮಾ ಮಸೀದಿ ಉಳ್ತುರು, ರಾಜೇಶ್ ಪೂಜಾರಿ ಕೈತೇರಿ, ಹರೀಶ್ ಪೊಕ್ಕಿ, ಶಶಿಧರ್ ಶೆಟ್ಟಿ ನಾರಡ್ಕಗುತ್ತು, ಭಾಸ್ಕರ್ ಬಲ್ಯಾಯ, ದಯಾನಂದ ಅಲಂತ್ಯಾರು, ರಮೇಶ್ ಪೂಜಾರಿ ಪಡ್ಡಯಿಮಜಲು ಮತ್ತು ಗಣ್ಯರು ಉಪಸ್ಥಿತರಿದ್ದರು.
ಬೆಳಿಗ್ಗೆ ಕೃಷ್ಣಾಷ್ಟಮಿ ಆಚರಣೆಯನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಎನ್.ಪುರುಷೋತ್ತಮ ರಾವ್ ಉದ್ಘಾಟಿಸಿದರು.ಧರಣೇಂದ್ರ ಕುಮಾರ್ ಮಾಜಿ ಜಿ.ಪ ಉಪಾಧ್ಯಕ್ಷರು ಹಾಗು ಸಮಿತಿ ಗೌರವಾಧ್ಯಕ್ಷರು ಸ್ವಾಗತಿಸಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ವಂದಿಸಿದರು.