Site icon Suddi Belthangady

ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ- ನಿವ್ವಳ ರೂ.1,02,57,219/ ಲಾಭ, ಶೇ.13.5 ಡಿವಿಡೆಂಟ್ ಘೋಷಣೆ

ಬೆಳಾಲು: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾ ಸಭೆ ಸೆ.10 ರಂದು ಸಂಘದ ಅಧ್ಯಕ್ಷ ಹೆಚ್.ಪದ್ಮ ಗೌಡ ಅಧ್ಯಕ್ಷತೆಯಲ್ಲಿ ಶ್ರೀ ಧ.ಮ.ಪ್ರೌಢ ಶಾಲಾ ಆವರಣದಲ್ಲಿ ಜರಗಿತು.

ಆರ್ಥಿಕ ವರ್ಷದಲ್ಲಿ ಸಂಘವು ನಿವ್ವಳ ರೂ.1,02,57,219/ ಲಾಭ ಗಳಿಸಿ ಶೇ.13.50 ಡಿವಿಡೆಂಟ್ ಘೋಷಣೆ ಮಾಡಲಾಯಿತು.ರೂ 2.35 ಕೋಟಿ ಪಾಲು ಬಂಡವಾಳ, ರೂ.9.35 ಕೋಟಿ ಠೇವಣಿ,ರೂ.27.15 ಹೊರ ಬಾಕಿ, ವಾರ್ಷಿಕ ರೂ.112 ಕೋಟಿ ವ್ಯವಹಾರ ನಡೆಸಿದೆ, 84 ವಿವಿಧ ಗುಂಪುಗಳಲ್ಲಿ 715 ಸದಸ್ಯರನ್ನು ಹೊಂದಿದ್ದಾರೆ.

ಅಧ್ಯಕ್ಷ ಹೆಚ್. ಪದ್ಮ ಗೌಡ ಮಾತನಾಡಿ ಸಂಘವು ಹಲವು ವರ್ಷಗಳಿಂದ ಉತ್ತಮ ಸಾಧನೆ ಮಾಡಿ ಲಾಭದಾಯಕವಾಗಿ ಪ್ರಗತಿ ಪಥದಲ್ಲಿ ಮುನ್ನಡೆಯಲು ಸದಸ್ಯರಹಾಗೂ ಗ್ರಾಹಕರ ಪ್ರೋತ್ಸಾಹ, ಸಹಕಾರದಿಂದ ಸಾಧ್ಯ ವಾಗಿದೆ.ಸಹಕಾರ ನೀಡುತ್ತಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿಗೆ, ವಿವಿಧ ಇಲಾಖೆಯಅಧಿಕಾರಿಗಳಿಗೆ, ಗ್ರಾಹಕರಿಗೆ, ಸದಸ್ಯರಿಗೆ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಕಾರ್ಯನಿರ್ವಾಣಾಧಿಕಾರಿ ನಾರಾಯಣ ಗೌಡ ವರದಿ ವಾಚಿಸಿ ಜಮಾ ಖರ್ಚು ವಿವರ ನೀಡಿದರು.ಉಪಾಧ್ಯಕ್ಷ ಸುರೇಂದ್ರ ಗೌಡ ಸ್ವಾಗತಿಸಿ, ನಿರ್ದೇಶಕ ಸುಲೈಮಾನ್ ಬಿ.ವಂದಿಸಿದರು.ನಿರ್ದೇಶಕರುಗಳಾದ ದಿನೇಶ್ ಎ., ವಿಜಯ ಗೌಡ ಎಸ್., ದಾಮೋದರ ಗೌಡ ಸುರುಳಿ, ರಾಜಪ್ಪ ಗೌಡ, ರಮೇಶ್ ಗೌಡ ಎ., ಎಲ್ಯಣ್ಣ ನಾಯ್ಕ, ಮಾಣಿಗ, ಸೀತಮ್ಮ.ಕೆ.ಎಂ, ಸುಜಾತಾ ಉಪಸ್ಥಿತರಿದ್ದರು.ಸಿಬ್ಬಂದಿಗಳು ಸಹಕರಿಸಿದರು

Exit mobile version