Site icon Suddi Belthangady

ಉಜಿರೆ: ಅನುಗ್ರಹ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿ ಮಹಮ್ಮದ್ ರಯ್ಯಾನ್ ಕರಾಟೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಉಜಿರೆ: ಶೋರಿನ್ ರಿಯೋ ಕರಾಟೆ ಅಸೋಸಿಯೇಷನ್ ಆಶ್ರಯದಲ್ಲಿ ಮೂಡಬಿದ್ರಿಯ ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಎಂ.ಕೆ.ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜು ಸಹಯೋಗದೊಂದಿಗೆ ಸೆ.9ರಂದು ಮೂಡಬಿದ್ರಿಯ ಸಮಾಜ ಮಂದಿರದಲ್ಲಿ ನಡೆದ ರಾಜ್ಯ ಮಟ್ಟದ 20ನೇ ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯ 9ರಿಂದ 10 ವಯೋಮಾನದ 22ರಿಂದ 25 ಕಿಲೋ ವಿಭಾಗದಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾದ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ರಯ್ಯಾನ್ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅವರು ಸೆನ್ಸಾಯಿ ಸಿಹಾನ್ ಅಬ್ದುಲ್ ರಹಮಾನ್ ಅವರಿಂದ ತರಬೇತಿ ಪಡೆದಿದ್ದರು.ಅವರು ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ ಬಿ. ಎಚ್.ಇಬ್ರಾಹಿಂ ಮತ್ತು ನೂರ್ ಜಹಾನ್ ದಂಪತಿ ಪುತ್ರ.

Exit mobile version