Site icon Suddi Belthangady

ಕಬಡ್ಡಿ ಪಂದ್ಯಾಟದಲ್ಲಿ ಹೋಲಿ ರಿಡೀಮರ್ ಶಾಲಾ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ಸೆಪ್ಟೆಂಬರ್ 9ರಂದು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಡಗಕಾರಂದೂರಿನಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಬಾಲಕ ಬಾಲಕಿಯರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟವು ನಡೆಯಿತು.

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲಾ ಬಾಲಕರ ತಂಡ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ಶ್ಲಾಘನೀಯ.

ತಂಡದ ನಾಯಕ ಮನ್ವಿತ್ ಆರ್ (7ನೇ) ಉತ್ತಮ ಸವ್ಯಸಾಚಿ ಆಟಗಾರನಾಗಿ, ಅಲೀನ್ ಆಝಿ (7ನೇ) ಉತ್ತಮ ಹಿಡಿತಗಾರನಾಗಿ ಹಾಗೂ ರೋನ್ಸ್ಟನ್ ಸೀಕ್ವೇರಾ (7ನೇ) , ಕುಲದೀಪ್ (7ನೇ) , ಅಜನ್ಯ (7ನೇ), ಶಮಂತ್ ಶೆಟ್ಟಿ (7ನೇ), ಮಹಮ್ಮದ್ ಮಿಸ್ತಾ (7ನೇ), ಜೋಯ್ಲನ್ (7ನೇ), ಸನತ್ (7ನೇ) , ಜೋಶ್ವಾ ಡಿಸೋಜ (6ನೇ), ಪ್ರಣವ್(6ನೇ) ಮತ್ತು ಅಜಿತ್ (6ನೇ) ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಶರತ್ ಸಂತೋಷ್ ಪಿಂಟೋರವರು ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದರು.ಶಾಲಾ ಸಂಚಾಲಕರಾದ ಅತೀ ವಂದನೀಯ ಫಾ. ವಾಲ್ಟರ್ ಡಿಮೆಲ್ಲೋ ಹಾಗು ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ. ಕ್ಲಿಫರ್ಡ್ ಪಿಂಟೋ ರವರು ಸಹಕರಿಸಿದರು.

Exit mobile version