Site icon Suddi Belthangady

ಕೊಕ್ಕಡ ಜೇಸಿ: ಜೇಸಿ ಸಪ್ತಾಹ 2023

ಕೊಕ್ಕಡ: ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಜೇಸಿ ಸಪ್ತಾಹವನ್ನು ಸ.ಕಿ.ಪ್ರಾ. ಶಾಲೆ ಕೊಳಕ್ಕೆ ಬೈಲು ಎಂಬಲ್ಲಿವಿದ್ಯಾರ್ಥಿ ನಾಯಕಿ ಕು.ತನುಶ್ರೀ ದೀಪ ಬೆಳಗಿಸಿ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಘಟಕಾಧ್ಯಕ್ಷರಾದ ಜಿತೇಶ್ ಎಲ್ ಪಿರೇರಾ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಮಿತ್ರ, ಶಿಶಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀ ಯಶೋಧರ ಭಟ್ ಆಗಮಿಸಿ ಶುಭ ಹಾರೈಸಿದರು.

ಎಲ್ಲಾ ಮಕ್ಕಳಿಗೂ ಅಕ್ಷರ ದೀವಿಗೆ ಕಾರ್ಯಕ್ರಮದಂತೆ ಲೈಬ್ರರಿ ಪುಸ್ತಕ ವಿತರಣೆ ಮಾಡಲಾಯಿತು.ಶಾಲೆಗೆ ಕಿಟ್ ವಿತರಣೆ ಮಾಡಲಾಯಿತು.

ಮುಖ್ಯ ಶಿಕ್ಷಕಿ ಶ್ರೀಮತಿ ಸುಗುಣಾ, ಹಿರಿಯ ಸದಸ್ಯರಾದ ಜೋಸೆಫ್ ಪಿರೇರಾ ಶುಭ ಹಾರೈಸಿದರು.ಜೆಸಿಂತಾ ಡಿ ಸೋಜ ಜೇಸಿ ವಾಣಿ ವಾಚಿಸಿದರು.

ಗೌರವ ಶಿಕ್ಷಕಿಯಾದ ಶ್ರೀಮತಿ ಸುಮಾ ಉದ್ಘಾಟಕರ ಪರಿಚಯ ಮಾಡಿದರು.ಕೋಶಾಧಿಕಾರಿ ಜಸ್ವಂತ್ ಪಿರೇರಾ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶ್ರೀಧರ ರಾವ್ ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕರಾದ ಶ್ರೀ ಸಂತೋಷ್ ವಂದಿಸಿದರು.

Exit mobile version