Site icon Suddi Belthangady

ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ-ರೂ.61ಲಕ್ಷ ನಿವ್ವಳ ಲಾಭ, ಶೇ.25% ಡಿವಿಡೆಂಟ್ ಘೋಷಣೆ-ಸಂಘದಿಂದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಗೆ 20ಲಕ್ಷ ಅನುದಾನದಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

ಮಡಂತ್ಯಾರ್ : ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆಯು ಸೇಕ್ರೆಡ್ ಹಾರ್ಟ್ ಸಭಾಂಗಣದಲ್ಲಿ ಸೆ. 10ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಲೆನ್ಸಿ ಪಿಂಟೊ ವಹಿಸಿದ್ದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ವ. ಫಾ. ಲಾರೆನ್ಸ್ ಮಸ್ಕರೇನ್ಹಸ್, ಮುಖ್ಯ ಸಲಹೆಗಾರ ಮೋನಪ್ಪ ಪೂಜಾರಿ ಕಂಡೆತ್ಯಾರ್, ಉಪಾಧ್ಯಕ್ಷ ಹೆನ್ರಿ ಮೊರಾಸ್, ವೃತ್ತಿಪರ ನಿರ್ದೇಶಕರಾದ ಲಿಯೋ ನೊರೊನ್ನಾ, ಫೆಲಿಕ್ಸ್ ಡಿ ಕೋಸ್ತಾ, ನಿರ್ದೇಶಕರಾದ ಸಿರಿಲ್ ಸಿಕ್ವೇರಾ, ವಿವೇಕ್ ಪಾಯ್ಸ್, ಜೋಯಲ್ ಮೆಂಡೋನ್ಸಾ ಲಿಯೋ ರೊಡ್ರಿಗಸ್, ಗ್ರೆಗೊರಿ ಸೇರಾ, ರೊನಾಲ್ಡ್ ಸಿಕ್ವೇರಾ, ಶ್ರೀಮತಿ ಸೆಲೆಸ್ತಿನ್ ಡಿಸೋಜಾ, ಶ್ರೀಮತಿ ಗ್ರೇಸಿ ರೀಟಾ ರೆಬೆಲ್ಲೊ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾ ವಾರ್ಷಿಕ ವರದಿಯನ್ನು ಮಂಡಿಸಿದರು. ನಿರ್ದೇಶಕ ರೊನಾಲ್ಡ್ ಸಿಕ್ವೇರಾ ಸ್ವಾಗತಿಸಿದರು.

ಫ್ರಾನ್ಸಿಸ್ ವಿ. ವಿ. ಕಾರ್ಯಕ್ರಮ ನಿರೂಪಿಸಿದರು.

ಸಂಘದ ಸಿಬ್ಬಂದಿಗಳಾದ ಡೋನ್ ಪ್ರವೀಣ್ ಕ್ರಾಸ್ತಾ, ಶ್ರೀಮತಿ ಸ್ವೇತಾ ರಾವ್, ಜೀವನ್, ರಮೇಶ್, ಆಲ್ವಿನ್ ಸಹಕರಿಸಿದರು.

ಸಂಘದಿಂದ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಗೆ ರೂ.20ಲಕ್ಷ ಅನುಧಾನದಲ್ಲಿ ವಿಜ್ನ್ಯಾನ ಪ್ರಯೋಗಾಲಯವು ಇಂದು ಉದ್ಘಾಟನೆ ನೆರವೇರಿದೆ.ರೂ.104.62ಕೋಟಿ ವ್ಯವಹಾರ ಮಾಡಿ ರೂ 61ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ 25% ಡಿವಿಡೆಂಡ್ ಘೋಷಿಸಿದರು.

Exit mobile version