ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಿಜೃಂಭಣೆಯ ಮರಿಯ ಜಯಂತಿಯನ್ನು ಆಚರಿಸಲಾಯಿತು.
ಸೆ.1 ರಿಂದ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭವಾದ ಮರಿಯ ಜಯಂತಿ ಆಚರಣೆಯನ್ನು ವಿಶೇಷವಾಗಿ ಮಹಿಳೆಯರು ಮಾತೆ ಮಾರಿಯಮ್ಮನವರ ಸ್ವರೂಪವನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ ಬೆಳಿಗ್ಗೆ ಮತ್ತು ಸಂಜೆ ತಾಯಿ ಮರಿಯಳಿಗೆ ನೋವೇನಾ ಮತ್ತು ಬಲಿಪೂಜೆಯನ್ನು ಅರ್ಪಿಸಿ ಪ್ರಾರ್ಥಿಸಿದರು.
ಅಷ್ಟ ದಿನಗಳ ಈ ಆಚರಣೆಯನ್ನು ಶುಕ್ರವಾರ ಸಂಜೆ ಬಲಿಪೂಜೆ, ಮಹಿಳೆಯರಿಂದ ಹೊರೆ ಕಾಣಿಕೆ ಅರ್ಪಣೆ, ಅನ್ನಸಂತರ್ಪಣೆ ಹಾಗೂ ಕಬ್ಬು ವಿತರಣೆ ಇದರ ಆಕರ್ಷಣೆಯಾಗಿತ್ತು.
ಬಲಿಪೂಜೆಯಲ್ಲಿ ವಂದನಿಯ ಫಾ.ಶಾಜಿ ಮಾತ್ಯು ಹಾಗೂ ಫಾ.ಅರುಣ್ ಕೊಕ್ಕಡ ನೇತೃತ್ವ ವಹಿಸಿದ್ದರು.